ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ಇ -ಶ್ರಮ್ ಕಾರ್ಡು ಸಹಕಾರಿ : ಡಾ. ಸವಿತಾ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.01- ಇಎಸ್‍ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಪಡೆದುಕೊಳ್ಳದ ಪತ್ರಕರ್ತರು, ಪÀತ್ರಿಕಾ ಪ್ರತಿನಿಧಿಗಳಿಗೆ ಇ- ಶ್ರಮ್ ಕಾರ್ಡ್ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಡಾ.ಸವಿತಾ ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರಥಮವಾಗಿ ಜಿಲ್ಲಾ ಕೇಂದ್ರದ ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಇಎಸ್‍ಐ, ಪಿಎಫ್ ಸೌಲಭ್ಯಗಳು ಇಲ್ಲದ ಪತ್ರಕರ್ತರು, ಪತ್ರಿಕಾ ಪ್ರತಿನಿಧಿಗಳು ಹಾಗೂ ವಿತರಕರಿಗೆ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಇ-ಶ್ರಮ್ ಕಾರ್ಡ್ ನೋಂದಣಿ ಹಾಗು ವಿತರಣಾ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಎಸ್‍ಐ, ಪಿಎಫ್ ಸೌಲಭ್ಯಗಳು ಇಲ್ಲದ ಪತ್ರಕರ್ತರು, ಪತ್ರಿಕಾ ಪ್ರತಿನಿಧಿಗಳು ಹಾಗೂ ವಿತರಕರನ್ನು ಸಹ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರ ಸೇರ್ಪಡೆಯಾಗಿದೆ. ಇದನ್ನು ಮನಗಂಡು ಜಿಲ್ಲೆಯಲ್ಲಿ ಪತ್ರಕರ್ತರು, ವಿತರಕರು ಹಾಗೂ ಪ್ರತಿನಿಧಿಗಳಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದರು.
ಇದೊಂದು ಕಾರ್ಮಿಕ ಇಲಾಖೆಗೆ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸುವ ಡೇಟಾ ಆಗಿದೆ. ಈ ಮೂಲಕ ಸರ್ಕಾರಗಳಿಗೆ ಅಸಂಘಟಿತ ಕಾರ್ಮಿಕರಿಗೆ ಯೋಜನೆ ರೂಫಿಸಲು ಹಾಗು ವಿವಿಧ ಯೋಜನೆಯಡಿ ಸವಲತ್ತು ಕಲ್ಪಿಸಿಕೊಡಲು ಸಹಕಾರಿಯಗುತ್ತದೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಇ-ಶ್ರಮ ಕಾರ್ಡು ನೊಂದಾಯಿತರಿಗೆ ನೀಡು ಸವಲತ್ತುಗಳು ಲಭಿಸಲಿದೆ. ಇದರಿಂದ ದೇಶದ ಅರ್ಥಿಕ ಅಭಿವೃದ್ದಿಗೆ ಹೆಚ್ಚಿನ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪತ್ರಕರ್ತರು ಹಾಗೂ ಪ್ರತಿನಿಧಿಗಳ ಮನವಿಯ ಹಿನ್ನೆಲೆಯಲ್ಲಿ ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸಲಾಗುತ್ತಿದೆ. ಇವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅವರ ಕೌಶಲ್ಯ ಅಭಿವೃದ್ದಿ ಒತ್ತು, ಜಾಗೃತಿ ಶಿಬಿರ ಇ-ಶ್ರಮ್ ಫಲಾನುಭವಿ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಪಘಾತ ವಿಮೆ ಪರಿಹಾರ 5 ಲಕ್ಷದವರೆಗೆ ಇರುತ್ತದೆ ಎಂದರು.
ಬಳಿಕ 50ಕ್ಕು ಹೆಚ್ಚು ಪತ್ರಕರ್ತರು, ಪತ್ರಿಕಾ ಪ್ರತಿನಿಧಿಗಳು ಹಾಗೂ ವಿತಕರು ನೊಂದಾಯಿಸಿಕೊಂಡು ಇ- ಶ್ರಮ ಕಾರ್ಡುಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಹಿರಿಯ ನಿರೀಕ್ಷಕಿ ವೀಣಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿಮಹೇಶ್, ತಾಲೂಕು ಪತ್ರಿಕಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ದೊಡ್ಡರಾಯಪೇಟೆ ಪುರುμÉೂೀತ್ತಮ್, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಹಾಗೂ ಪತ್ರಕರ್ತರು, ಪ್ರತಿಕಾ ಪ್ರತಿನಿಧಿಗಳು ಇದ್ದರು.