ಸರ್ಕಾರಿ ಶಾಲೆ ಸಿನಿಮಾ ಚಿತ್ರೀಕರಣ : ನಟ ಹರಿಯಬ್ಬೆ  ಗುಣ

ಹಿರಿಯೂರು. ಮಾ. 14- ಸರ್ಕಾರಿ ಶಾಲೆ ಎಚ್ ಎಂಟು ಎಂಬ ಸಿನಿಮಾ ಚಿತ್ರೀಕರಣವನ್ನು ಆರಂಭಿಸುವುದಾಗಿ ನಟ ಹಾಗೂ ನಿರ್ದೇಶಕ ಹರಿಯಬ್ಬೆ ಗುಣ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಿನಿಮಾದಿಂದ ಬರುವ ಆದಾಯದ ನಾಲ್ಕನೇ ಒಂದು ಭಾಗವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಡುವುದಾಗಿ ತಿಳಿಸಿದರು.  ನಟ ರಾಘವೇಂದ್ರ ರಾಜ್ ಕುಮಾರ್ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ  ಐದು ಜನ ನಾಯಕಿಯರು ಸೇರಿದಂತೆ ಹೊಸ ಪ್ರತಿಭೆಗಳಿಗೆ ಹಾಗೂ ಸುಮಾರು 800 ವಿದ್ಯಾರ್ಥಿಗಳಿಗೆ ಅಭಿನಯಿಸಲು ಅವಕಾಶ ನೀಡಲಾಗುವುದು,ಸರ್ಕಾರಿ ಶಾಲೆ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದಾಗಿದೆ ಎಂದರು. ಮೇ 1ರಿಂದ ಚಿತ್ರೀಕರಣ ಆರಂಭವಾಗಲಿದೆ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆ ಕಾಣಲಿದೆ, ಇದಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಲಾವಿದರಾದ ಜೆ.ತಿಪ್ಪೇಸ್ವಾಮಿ, ಹೆಚ್.ಜೆ.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.