ಸರ್ಕಾರಿ ಶಾಲೆ ದಾಖಲಾತಿ ಆಂದೋಲನ

ಚಿತ್ತಾಪೂರ:ಜೂ.16: ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಶಾಲೆಯ ಮುಖ್ಯಗುರುಗಳಾದ ಚಂದ್ರಕಾಂತ ಐನಾಪೂರ ತಿಳಿಸಿದರು.

ತಾಲೂಕಿನ ಕದ್ದರ್ಗಿ ಗ್ರಾಮದ 2023-24 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ದಾಖಲಾತಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ದಾಖಲಾತಿ ಆಂದೋಲ ಕೈಗೊಂಡು
ಮಾತನಾಡಿದ ಅವರು ಶಿಕ್ಷಣ ಒಂದು ಸಂವಿಧಾನಬದ್ಧ ಮೂಲ ಭೂತ ಹಕ್ಕು ಆಗಿದೆ ಈ ಹಕ್ಕನ್ನು ಯಾವುದೇ ತಾರತಮ್ಯ ಅಸಮಾನತೆ ಮತ್ತು ಪ್ರತ್ಯೇಕತೆಯಿಲ್ಲದೆ ಎಲ್ಲಾ ಮಕ್ಕಳಿಗೆ ಸಮಾನತೆ ನೀಡಿ ಸಮಾನ ಅವಕಾಶಗಳನ್ನು ನೀಡಿದೆ ಎಂದರು.

ಆರು ವರ್ಷದ ಮೇಲ್ಪಟ್ಟ ಹೆಣ್ಣಿರಲಿ, ಗಂಡಿರಲಿ ತಪ್ಪದೇ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ನೋಂದಾಯಿಸಿ ಮಕ್ಕಳ ಶಿಕ್ಷಣ ಕಲಿಕೆಗೆ ತಂದೆ ತಾಯಂದಿರು ಸಹಕರಿಸಬೇಕು.ಶಾಲಾ ಮಕ್ಕಳಿಗಾಗಿ ಉಚಿತ ಸಮವಸ್ತ್ರ, ಹಾಲು, ಪುಸ್ತಕ, ಬಿಸಿಯೂಟ, ಶೂಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಕಪ್ಪ ದೇಸಾಯಿ, ಅಶೋಕ ಗುತ್ತೇದಾರ್, ಬಸವರಾಜ ಹಾದಿಮನಿ, ಶಾಲೆಯ ಶಿಕ್ಷಕರಾದ ಮಹಾದೇವಪ್ಪ, ಶ್ರೀಮತಿ ನಾಗಮ್ಮ ಕುಂಬಾರ, ಶ್ರೀಮತಿ ಸೌಭಾಗ್ಯ ಕಾಡನಗೌಡ್ರು, ಅತಿಥಿ ಶಿಕ್ಷಕ ಜಗದೇವ ಕುಂಬಾರ, ಸೇರಿದಂತೆ ಮಕ್ಕಳು ಇದ್ದರು.