
ಬೀದರ್: ಆ.7:ಸರ್ಕಾರಿ ಶಾಲೆಗಳು ಮಳೆಗಾದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಶಿಥಿಲಗೊಂಡ ಕಟ್ಟಡಗಳ ನಡುವೆ ಮಕ್ಕಳೂ ಸಹ ಪಾಠ ಕೇಳಲು ಒದ್ದಾಡುತ್ತಿದ್ದಾರೆ ಎಂಬುದು ಹಲವಾರು ಬಾರಿ ವರದಿಯಾಗಿದೆ. ಆದರೆ ಕಟ್ಟಡ ಸರಿ ಇದ್ದರೂ ಕನ್ನ ಹಾಕಿ ಬಿಸಿ ಊಟದ ಸಾಮಗ್ರಿ ಕದಿಯುತ್ತಾರೆ ಎಂದರೆ ಅದು ನಿಜಕ್ಕೂ ಬೇಸರದ ಸಂಗತಿ.
ಆದರೆ ನಿಜಕ್ಕೂ ಇಂತದೊಂದು ಘಟನೆ ನಿನ್ನೆ ನಡೆದಿದೆ. ಈ ಘಟನೆ ನಡೆದಿರುವುದು ಬೀದರ್?ನಲ್ಲಿ. ಸರ್ಕಾರಿ ಶಾಲೆ ಗೋಡೌನ್‍ಗೆ ಕನ್ನ ಹಾಕಿದ ಖದೀಮರು ಅಲ್ಲಿನ ಸಾಮಗ್ರಿಗಳನ್ನು ಕದ್ದಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.
ಗೋಡೌನ್‍ನಲ್ಲಿದ್ದ ಎರಡು ಮೂಟೆಗಳನ್ನ ಹೊತ್ತೊಯ್ದ ಇಬ್ಬರು ಖದೀಮರು ಸಿಸಿ ಟಿವಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇಷ್ಟು ಭದ್ರತೆ ಇದ್ದರೂ ಸಹ ಕದಿಯಲು ಬಂದಿದ್ದಾರೆ. ಈ ದೃಷ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ ಅವರು ಯಾರು ಎಂದು ಪತ್ತೆಹಚ್ಚಲಾಗುತ್ತದೆ. ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಬೇಲೂರು ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮಧ್ಯರಾತ್ರಿ 2 ಗಂಟೆಗೆ ಎರಡು ಚೀಲ ಕದ್ದು ಪರಾರಿಯಾದ ಖದೀಮರು
ಕಳ್ಳರು ರಾತ್ರಿ 2 ಗಂಟೆ ಸಮಯಕ್ಕೆ ಕದಿಯಲು ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರಿನಲ್ಲಿ ಬಂದು ಕಳ್ಳತನದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಖದೀಮರ ಕೈಚಳಕ ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ನಿನ್ನೆಯಷ್ಟೇ ಹುಲಸೂರು ತಾಲೂಕಿಗೆ ಭೇಟಿ ನೀಡಿ ಅಪರಾಧ ಕೃತ್ಯ ತಡೆಯುವುದಾಗಿ ಹೇಳಿದ್ದ ಎಸ್‍ಪಿ ಈಗ ವಿಚಾರಣೆ ನಡೆಸುತ್ತಿದ್ದಾರೆ.
ಎಸ್‍ಪಿ ಭೇಟಿ ಬೆನ್ನಲ್ಲೆ ತಮ್ಮ ಕೈಚಳಕ ತೋರಿಸಿದ ಕಳ್ಳರು
ಎಸ್‍ಪಿ ಭೇಟಿ ಬೆನ್ನಲ್ಲೆ ತಮ್ಮ ಕೈಚಳಕ ತೋರಿಸಿದ ಖದೀಮರು ತಮ್ಮ ಆಟವನ್ನು ನಿಲ್ಲಿಸಿಲ್ಲ. ಹುಲಸೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು ಪೆÇಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.