ಸರ್ಕಾರಿ ಶಾಲೆ ಆವರಣದಲ್ಲಿ
 ಆರ್ ಎಸ್ ಎಸ್ ಬೈಟಕ್: ಆಕ್ಷೇಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.05: ಇಲ್ಲಿನ ಇಂದಿರಾ ನಗರದ ಅಂಬೇಡ್ಕರ್ ಸರ್ಕಾರಿ ಹಿರಿಯ ಪ್ರಾಥಮಿಕವಾಗಿ ಶಾಲಾ ಆವರಣದಲ್ಲಿ ಆರ್ ಎಸ್ ಎಸ್ ಅವರಿಂದ ಇಂದು ಬೈಟಕ್ ನಡೆದಿರುವ ಬಗ್ಗೆ ಆಕ್ಷೇಪ ಕೇಳಿಬಂದಿದೆ.
ಕೆಲ ತಿಂಗಳ ಹಿಂದೆ ನಗರದ ಪಶು ಸಂಗೋಪನಾ ಆಸ್ಪತ್ರೆ ಆವರಣದಲ್ಲಿ ಸಂಘ ಪರಿವಾರದಿಂದ ಬೈಟೆಕ್ ನಡೆದಿತ್ತು ಇದನ್ನು ಹಲವರು ವಿರೋಧಿಸಿದ್ದರಿಂದ ಅಲ್ಲಿ ಕೈ ಬಿಡಲಾಯ್ತು.
ಈಗ  ಸೈದ್ಧಾಂತಿಕ ವಿರೋಧಿ, ಸಾಕಷ್ಟು ಬೆದರಿಕೆಗಳು ಬಂದರೂ ಸಹ ಅದ್ಯಾವುದನ್ನು ಲೆಕ್ಕಿಸದೆ ತಮ್ಮ ಜೀವನದುದ್ದಕ್ಕೂ ಸಂಘ ಪರಿವಾರವನ್ನು ಕಟುವಾಗಿಯೇ ಟೀಕಿಸುತ್ತಾ ಬಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಹೆಸರಿರುವ ಈ ಸರ್ಕಾರಿ ಶಾಲೆಯ ಆವರಣದಲ್ಲಿ ತರಬೇತಿ, ಬೈಟಕ್ ನಡೆಸುತ್ತಿರುವುದರ ಬಗ್ಗೆ ಸಹ ಆಕ್ಷೇಪ  ಕೇಳಿ ಬಂದಿದೆ.
ದಲಿತ ಮುಖಂಡ ಅರುಣ್ ಕುಮಾರ್ ಅವರು  ಇದು ಅತ್ಯಂತ ಖಂಡನೀಯ. ಇಂದು ರಜೆ ಇರುವ ಕಾರಣ ನಾಳೆಯೇ  ಸಂಬಂಧಪಟ್ಟ ಮುಖ್ಯಗುರುಗಳು, ಬಿ.ಇ.ಒ ಮತ್ತು ಡಿ.ಡಿ.ಪಿ.ಐ ಹತ್ತಿರ ಹೀಗೆ ಮಾಡಲು ಅವಕಾಶ ಕೊಡಬಾರದೆಂದು ತಿಳಿಸುವುದಾಗಿ ಹೇಳಿದ್ದಾರೆ.