ಸರ್ಕಾರಿ ಶಾಲೆಯ ಶಿಕ್ಷಕನ ಉಚಿತ ಕೊಡುಗೆ ಆದರ್ಶ


ಸಂಜೆವಾಣಿ ವಾರ್ತೆ
ಕುಕನೂರು, ಸೆ.09: ತಾಲೂಕ ಮಂಗಳೂರು ಗ್ರಾಮದ ಸಿದ್ದಲಿಂಗ ನಗರದ ಸರ್ಕಾರಿ ಕಿರಿಯ  ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹನುಮಂತಪ್ಪ ಎನ್ ಉಪ್ಪಾರ್ ತಮ್ಮ ಸ್ವಂತ ಹಣದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ ನೋಟ್ ಬುಕ್ ಫೈಲ್ ಪೆನ್ಸಿಲ್ ಇತ್ಯಾದಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
  ಮಂಗಳೂರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಡಿ ಮಳಿಗಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ಕಾರಿ ಶಾಲೆಯ ಬಲವರ್ಧನೆಗೆ ಇಂತಹ ಉತ್ತೇಜಕ ಕಾರ್ಯಕ್ರಮಗಳು ಪ್ರೇರಕವಾಗುತ್ತವೆ. ಮಕ್ಕಳ ಕಲಿಕೆಗೆ ಸ್ಪೂರ್ತಿಯಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಮಂಗಳೂರು ವಲಯದ ಬಿ ಆರ್ ಸಿ ನೋಡಲ್ ಅಧಿಕಾರಿ ಶಿವಪ್ಪ ಉಪ್ಪಾರ್  ಮಾತನಾಡುತ್ತಾ ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳಕ್ಕೆ ಈ ರೀತಿಯ  ಕೊಡುಗೆ ಇಂದು ಅವಶ್ಯವಾಗಿದೆ. ಶಿಕ್ಷಕರ ಈ ಒಂದು ಸೇವೆ ಮಾದರಿಯವಾದದ್ದು ಎಂದು ಹರ್ಷ ವ್ಯಕ್ತಪಡಿಸಿದರು.
 ಮಂಗಳೂರು ಕೆಪಿಎಸ್ ಶಾಲೆಯ ಭೌತಿಕ ಸಮಿತಿಯ ಅಧ್ಯಕ್ಷ ಮಾಬುಸಾಬ ಗೋಡೆಕಾರ, ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಮಾರುತಿ ಹಾದಿಮನಿ,
 ಕುಕುನೂರು ಕೆ ಎಲ್ ಇ ಕಾಲೇಜಿನ ಉಪನ್ಯಾಸಕ ಶರಣಪ್ಪ ಉಮಚಗಿ ಅವರು ಹನುಮಂತಪ್ಪ ಉಪ್ಪಾರ್ ಶಿಕ್ಷಕರ  ನಿಸ್ವಾರ್ಥ ಸೇವೆ ನಮ್ಮ ಗ್ರಾಮಕ್ಕೆ ಮಾದರಿಯಾಗಿದೆ ಎಂದರು.
  ಮಂಗಳೂರು  ಗ್ರಾಮ ಪಂಚಾಯತಿಯ ಅಧ್ಯಕ್ಷ ಸಕ್ರಪ್ಪ ಚಿನ್ನೂರ್, ಉಪಾಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಸುರೇಶ್ ಮ್ಯಾಗಳೇಶಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್ ಆರೇರ್, ಯಲಬುರ್ಗಾ ತಾಲೂಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಾರುತಿ ಹಾದಿಮನಿ, ಯುವ ಸಾಹಿತಿಗಳಾದ ವಿರುಪಾಕ್ಷಪ್ಪ ಎಲಿಗಾರ್ ಅನಿಲಕುಮಾರ ನಿಂಗಾಪುರ ಮತ್ತು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೊಟ್ರ ಯ್ಶಾ,  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬ್ಯಾಗ್ ಫೈಲ್ ಇತ್ಯಾದಿಗಳನ್ನು ವಿತರಿಸಿ ಪ್ರೋತ್ಸಾಹ ವ್ಯಕ್ತಪಡಿಸಿದರು.
 ಇದೇ ಸಂದರ್ಭದಲ್ಲಿ ಪಕ್ಕದ ಶಾಲೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ  ಶಿಕ್ಷಕರು ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ ಪೆನ್ಸಿಲ್ ಗಳನ್ನು ವಿತರಿಸಿದರು.
  ಅಧ್ಯಕ್ಷತೆಯನ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಳೇಶ್ ಯತ್ನಟ್ಟಿಯವರು ವಹಿಸಿದ್ದರು. ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಮಾರುತಿ ಹಾದಿಮನಿ ಹಾಡಿದರು ಕಾರ್ಯಕ್ರಮಕ್ಕೆ ಸರ್ವರನ್ನ ಹನುಮಂತಪ್ಪ ಶಿಕ್ಷಕರು ಸ್ವಾಗತಿಸಿದರು  ಮಾಬುಸಾಬ ಗೋಡೆಕಾರ ಮತ್ತು ಮಾರುತಿ ಹಾದಿಮನಿ ಅವರು ನಿರ್ವಹಿಸಿದರೆ ಕೊನೆಯಲ್ಲಿ ಅನಿಲ್ ಕುಮಾರ್ ನಿಂಗಾಪೂರ ವಂದಿಸಿದರು.