ಸರ್ಕಾರಿ ಶಾಲೆಯ ಮಕ್ಕಳು ಬೀದಿಗೆ ಹಿಳಿದು ದಿಢೀರ್ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.06: ಶಿಕ್ಷಕರ ಕೊರತೆಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸರ್ಕಾರಿ ಶಾಲೆಯ ಮಕ್ಕಳು.
 ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಭೋಯಕೇರಿ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯ ವರೆಗೆ ಶಾಲೆ ನಡೆಯುತಿದ್ದು.
ಈ ಶಾಲೆಯಲ್ಲಿ ಒಟ್ಟು 157 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಖಾಯಂ ಶಿಕ್ಷಕರು ಒಬ್ಬರು ಇಲ್ಲದೇ, ಮುಖ್ಯಗುರು ಇಲ್ಲ, ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಶಾಲೆಗೆ ಬೀಗ ಜಡಿದು ಶಾಲೆಯ ಮಕ್ಕಳು ಶಾಲೆಯ ಮುಂದೆ ಬೀದಿಯಲ್ಲಿ ಕುಳಿತು ದಿಢೀರ್ ಪ್ರತಿಭಟನೆ  ನಡೆಸಿದರು.

One attachment • Scanned by Gmail