ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಹೆಮ್ಮೆಯ ಸಂಗತಿ : ಸುರೇಶ ಮುಂಜೆ

ಅಥಣಿ :ನ.24: ದಾನಿಗಳ ಸಾಹಾಯದಿಂದ ಮೂಲಭೂತ ಸೌಕರ್ಯಗಳನ್ನು ಪಡೆದು ಸರಕಾರಿ ಶಾಲೆಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಸ್ಪರ್ಧಾತ್ಮ ಪರೀಕ್ಷೆಯ ತರಬೇತಿ ನೀಡುತ್ತಿರುವುದು ಹೆಮ್ಮೆ ಸಂಗತಿ ತರಬೇತಿ ಪಡೆದ ಎಲ್ಲ ಶಿಕ್ಷಕರು ಮಕ್ಕಳಿಗೆ ಶ್ರದ್ದೆಯಿಂದ ಪಾಠ ಭೋದಿಸಿ ಎಂದು ತಹಶೀಲ್ದಾರ ಸುರೇಶ ಮುಂಜೆ ಅವರು ಹೇಳಿದರು,
ಅವರು ಪಟ್ಟಣದ ಹೊರ ವಲಯದಲ್ಲಿರುವ ಬಣಜವಾಡ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥಣಿ ಇವರು ಆಯೋಜಿಸಿದ್ದ ಜವಾಹರ ನವೋದಯ ವಿದ್ಯಾಲಯ, ಮುರಾರ್ಜಿ ದೇಸಾಯಿ ಮುಂತಾದ ವಸತಿ ಶಾಲೆಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಸಿದ್ಧತೆಗಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 5 ನೇ ತರಗತಿ ಬೋಧಿಸುವ ವಿಷಯಗಳ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ ಸರಕಾರದ ಯೋಜನೆಗಳಿಗೆ ಅವಲಂಬಿತರಾಗದೆ ಸ್ಥಳೀಯ ಜನರ ಸಾಹಾಯದಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರ ಈ ಯೋಜನೆ ರಾಜ್ಯಕ್ಕೆ ಮಾದರಿ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು,
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮರ ದುರ್ಗಣ್ಣವರ ಅವರು ಮಾತನಾಡಿ ಪ್ರಾಮಾಣಿಕ ಸೇವೆಗೆ ಈ ಸಮಾಜದಲ್ಲಿ ಯಾವತ್ತೂ ಬೆಲೆ ಇದೆ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತ ಸಾಗಿದರೆ ಅದಕ್ಕೆ ಸಮಾಜದಿಂದ ಗೌರವ ಸನ್ಮಾನಗಳು ಸಿಗುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಬಣಜವಾಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಬಣಜವಾಡ ಅವರು ಮಾತನಾಡಿ ದಾಸೋಹ ಪರಂಪರೆಯಲ್ಲಿ ಶಿಕ್ಷಣವು ಒಂದು. ನಮ್ಮ ಶಾಲೆಯಲ್ಲಿ ಕಲಿಯುವ ಎಲ್ಲ ಮಕ್ಕಳು ನನ್ನ ಮಕ್ಕಳು. ಅವರ ಸಾಧನೆ ನೋಡಿ ಸಂತೋಷ ಪಡುವ ಗುಣ ನಮ್ಮಲ್ಲಿ ಇರಬೇಕು, ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದ ಈ ಯೋಜನೆ ರಾಜ್ಯಕ್ಕೆ ಮಾದರಿ ಆಗಲಿದೆ ಎಂದು ಹೇಳಿದರು.
ಶಿಕ್ಷಣ ಪ್ರೇಮಿ ಕನ್ನಡ ಪ್ರಭ ಪ್ರಶಸ್ತಿ ವಿಜೇತ ಮಹಾವೀರ ಪಡನಾಡ ಅವರು ವಿಶೇಷ ಸ್ಪರ್ಧಾತ್ಮಕ ಪರೀಕ್ಷೆಯ ಕೈಪಿಡಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ ಈ ಯೋಜನೆಯನ್ನು ಶ್ರದ್ದೆ ನಿಷ್ಠೆಯಿಂದ ಶಿಕ್ಷಕರು ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಧಿಕಾರಿ ಬಸವರಾಜ ತಳವಾರ ಅವರು ಮಾತನಾಡಿ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡರೆ ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಳವಾಗುವುದು. ಶ್ರೀಮಂತ ಮಕ್ಕಳು ಖಾಸಗಿ ಟ್ಯೊಶನ್‍ಗಳಿಗೆ ಹೋಗಿ ತರಬೇತಿ ಪಡೆಯುತ್ತಾರೆ ಆದರೆ ಇಂದು ಇಲ್ಲಿ ತರಬೇತಿ ಪಡೆದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳಿಸುವರು ಎಂದು ಹೇಳಿದರು.
ಈ ವೇಳೆ ಬಿಆರ್ ಸಿ ಗೌಡಪ್ಪ ಖೋತ, ರಾಮನಗೌಡ ಪಾಟೀಲ, ಜಿ.ಎಮ್. ಹಿರೇಮಠ, ಎಸ್ ಎಮ್ ರಾಠೋಡ, ಸುರೇಶ ಚಿಕ್ಕಟ್ಟಿ, ಸೇರಿದಂತೆ ಮುಂತಾದವರು ಉಪಸ್ಥೀತರಿದ್ದರು.
ಮಹಾಂತೇಶ ಕುಲ್ಲೋಳಿ ಸ್ವಾಗತಿಸಿದರು, ಶ್ರೀಶೈಲ ಸನದಿ ವಂದಿಸಿದರು, ಕಾರ್ಯಕ್ರಮವನ್ನು ಶಿವಾನಂದ ಮೇಲ್ಗಡೆ, ಡಾ.ನಾಗವೇಣಿ ಪಾಟೀಲ ನಿರೂಪಿಸಿದರು,