ಸರ್ಕಾರಿ ಶಾಲೆಯಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆ

ಚನ್ನಪಟ್ಟಣ,ಜೂ.೭- ಪಟ್ಟಣದ ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಪರಿಸರ ಸ್ನೇಹಿ ಇಕೊ ಕ್ಲಬ್ ಹಾಗೂ ಸಮೃದ್ಧಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ.ಈ ಬಸವರಾಜು. ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬರಬೇಕು ಪ್ರತಿನಿತ್ಯ ಶಾಲಾ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಮೂಲಕ ಪರಿಸರ ದಿನಾಚರಣೆಯು ಅರ್ಥ ಗರ್ಭಿತವಾಗಿರುತ್ತದೆ ಯಂದು ತಿಳಿಸಿದರು ಹಾಗೂ ಕೇವಲ ಪರಿಸರ ದಿನ ಆಚರಣೆಗೆ ಸಿಮಿತವಾಗಿರದೆ ವರ್ಷಪೂರ್ತಿ ಪರಿಸರ ನಿರ್ವಹಣೆ ಮಾಡೋಣವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್‌ನ ಸಂಚಾಲಕರಾದ ಲಕ್ಷ್ಮೀ ಮಾತನಾಡಿ ಪ್ಲಾಸ್ಟಿಕ್ಕು ಗಾಳಿ, ನೀರು, ಮತ್ತು ಮಣ್ಣಿನಲ್ಲಿ ಸೇರಿ ವಿಷಕಾರಿ ಅಂಶಗಳನ್ನು ಹೆಚ್ಚಿಸುತ್ತದೆ, ಪ್ಲಾಸ್ಟಿಕ್ ನದಿ,ಕೆರೆ,ಸಮುದ್ರ ಸೇರಿ ಜಲಮಾಲಿನ್ಯ ಉಂಟು ಮಾಡುತ್ತದೆ, ಪ್ಲಾಸ್ಟಿಕ್ ಸುಟ್ಟಾಗ ಕ್ಯಾನ್ಸರ್ ಗೆ ಕಾರಣವಾಗುವ ಫ್ಯೂರಾನ್ಸ್ ಹಾಗೂ ಡೈಆಕ್ಸಿನ್ ವಿಷಕಾರಿ ಅನಿಲಗಳ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಈರಾನಾಯಕ್, ಎಸ್. ಅನುಸೂಯ, ಸುನೀತ ಬಿ, ಭವ್ಯಶ್ರೀ ಎಸ್, ಪುಟ್ಟಪ,ರೇಣುಕಮ್ಮ, ಲಿಲಾವತಿ, ರಾಜಲಕ್ಷ್ಮಿ, ಗಾಯಿತ್ರಿ, ಯೋಗೇಶ್ ಉಪಸ್ಥಿತರಿದ್ದರು.