ಸರ್ಕಾರಿ ಶಾಲೆಯಲ್ಲಿ ಪುಸ್ತಕ ಪೆನ್ನುಗಳ ವಿತರಣೆ 

ಸಂಜೆವಾಣಿ ವಾರ್ತೆ

ಹಿರಿಯೂರು.ಜೂ.೯;  ಹಿರಿಯೂರು ತಾಲ್ಲೂಕು ಲಕ್ಕವ್ವನ ಹಳ್ಳಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಪ್ರಗತಿ ಫೌಂಡೇಶನ್ ವತಿಯಿಂದ ಉಚಿತ ಪುಸ್ತಕ,ಪೆನ್ನು,ಪೆನ್ಸಿಲ್,ರಬ್ಬರ್ ಗಳನ್ನು   ನೀಡಲಾಯಿತು,ಪ್ರಗತಿ ಫೌಂಡೇಶನ್ ಅಧ್ಯಕ್ಷರಾದ ಮಂಜುನಾಥ್ ಎಮ್ ರವರು ಪುಸ್ತಕ ವಿತರಿಸಿದರು,ಕಾರ್ಯದರ್ಶಿ,ಶಿವಶಂಕರ್,ಎಲ್, ಉಳಿದಂತೆ ಉಪಕರಣಗಳನ್ನು ನೀಡಿರುತ್ತಾರೆ, ಕಾರ್ಯಕ್ರಮದಲ್ಲಿ,ಭಾರತ್ ಸೇವಾದಳದ ಅಧ್ಯಕ್ಷರಾದ ತಿಪ್ಪೇಸ್ವಾಮಿ,ಎಂಪಿ, ಗ್ರಾಮಪಂಚಾಯಿತಿ ಅಧ್ಯಕ್ಷರಾದ, ಸೀತಾರಾಮು,ಎಸ್ ಡಿ ಎಂ,ಸಿ,ಅಧ್ಯಕ್ಷರಾದ,ಮಂಜುನಾಥ್,ಆರ್,ಸದಸ್ಯರಾದ ರಂಗಮ್ಮ,ಪ್ರಾಧ್ಯಾಪಕರಾದ ತಿಪ್ಪೇಸ್ವಾಮಿ,ಹಾಗೂ ಸಹ ಶಿಕ್ಷಕಿಯರು ಭಾಗವಹಿಸಿದ್ದರು.