ಸರ್ಕಾರಿ ಶಾಲೆಯಲ್ಲಿ ಟ್ಯಾಬ್ ವಿತರಣೆ

ರಾಯಚೂರು,ಡಿ.೨೬-ಕೊರೋನಾ ಮಹಾಮಾರಿಯಿಂದ ಯಾವುದೆ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಟ್ಯಾಬ್ ವಿತರಣೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ಹೇಳಿದರು.
ತಾಲೂಕಿನ ಉಡುಮಗಲ ಖಾನಾಪೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಬ್ಲಿಕ್ ವಾಹಿನಿ, ರೋಟರಿ ಕ್ಲಬ್ ಹಾಗೂ ಶಿಕ್ಷಣ ಪ್ರೇಮಿಗಳು ಹಾಗೂ ದಾನಿಗಳಿಂದ ಆಯೋಜಿಸಿದ ಟ್ಯಾಬ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರೋನಾದಿಂದ ಶಿಕ್ಷಣ ಮತ್ತು ಕಲಿಕೆಗೆ ಯಾವುದೆ ತೊಡಕಾಗಬಾರದೆಂಬ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿಯವರು ಜ್ಞಾನ ದೀವಿಗೆ ಮೂಲಕ ಟ್ಯಾಬ್ ವಿತರಣೆ ಮಾಡಿ ಕಲಿಕೆಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಕಾರ್ಯವೆಂದರು.
ರೋಟರಿ ಕ್ಲಬ್ ಮುಖ್ಯಸ್ಥರಾದ ವಿಜಯ ಮಹಾಂತೇಶ, ಗುರುರಾಜ ಸೇನೆ ಗೆಳೆಯರ ಬಳಗದ ರಂಗರಾವ ದೇಸಾಯಿ ಕಾಡ್ಲೂರು, ಪಬ್ಲಿಕ್ ಟಿವಿ ವರದಿಗಾರ ವಿಜಯ ಜಾಗಟಗಲ್, ದಂಡಪ್ಪ ಬಿರಾದರ್ ಸೇರಿದಂತೆ ಅನೇಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜಶೇಖರ್ ದಿನ್ನಿ, ನಿಜಾನಂದ, ವಿರೇಶ ಅಂಗಡಿ, ಮಲ್ಲನಗೌಡ, ರಾಮು ಪರಿಟಾಲ ಸೇರಿದಂತೆ ಅನೇಕರಿದ್ದರು.
ಫೋಟೋ:೨೫ಅರ್‍ಸಿಅರ್೨-ಉಡುಮಗಲ್ ಖಾನಾಪೂರದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.