ಸರ್ಕಾರಿ ಶಾಲೆಯಲ್ಲಿ ಕಲಿತು ನಾಲ್ಕು ಚಿನ್ನದ ಪದಕ ಪಡೆದ ಸೈದಾ ಶೈಸ್ತಾ

ಸೇಡಂ,ನ,22:ಇತ್ತೀಚೆಗೆ ನಡೆದ ಕಲ್ಬುರ್ಗಿ ವಿಶ್ವವಿದ್ಯಾಲಯ ಆವರಣದಲ್ಲಿ 38ನೇ ಘಟಿಕೋತ್ಸವದಲ್ಲಿ ಗಣಿತ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಸೈದಾ ಶೈಸ್ತಾ. ಸರ್ಕಾರಿ ಶಾಲೆಯಲ್ಲಿ ಕಲಿತು ಚಿನ್ನದ ಪದಕ ಸೇಡಂ ನಗರಕ್ಕೆ ತಂದುಕೊಟ್ಟ ಕೀರ್ತಿ ಈ ವಿದ್ಯಾರ್ಥಿನಿಗೆ ಸಲ್ಲುತ್ತದೆ. ತಾಲೂಕಿನ ರಹಮತ್ ನಗರದಲ್ಲಿ ವಾಸವಿರುವ ಇವರ ಕುಟುಂಬವು ಇದೇ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಿಕ್ಷಣ ಕಲಿತಿರುತ್ತಾರೆ. ಸರ್ಕಾರಿ ಉರ್ದು ಮಾಧ್ಯಮ ಹೈಸ್ಕೂಲ್, (ಜೂನಿಯರ್ ಕಾಲೇಜಿನಲ್ಲಿ) ಹತ್ತನೇ ತರಗತಿ ಮುಗಿಸಿದ ನಂತರ 12ನೇ ತರಗತಿಯಲ್ಲಿ 91% ಅಂಕಗಳಿಸಿ ಕೂಡಾ ಇದೇ ಕಾಲೇಜಿನಲ್ಲಿ 2014ರಲ್ಲಿ ಪೂರ್ಣಗೊಳಿಸಿರುತಾರೆ.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಸ್ನಾತಕೋತ್ತರ ಕಾಲೇಜಿನಲ್ಲಿ 2017ರಲ್ಲಿ ಬಿಎಸ್ಸಿ ಯಲ್ಲಿ 89% ಅಂಕಗಳಿಸಿ 8ನೇ ಯಾರ್ಂಕ್ ಪಡೆದುಕೊಳ್ಳುತ್ತಾರೆ.ತದನಂತರ ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ 2019ರಲ್ಲಿ ಗಣಿತ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿ ನಾಲ್ಕು ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಸೈದಾ ಶೈಸ್ತಾ ತಂದೆ ಶಾಹಿದ್ ಇಕ್ಬಾಲ್ ತಾಯಿ ಅಕ್ಬರ್ ಯುನಿಸಾಬೇಗಮ್ ನಾಲ್ಕು ಚಿನ್ನದ ಪದಕ ಪಡೆದವರು ಮೂರನೆಯವರು, ನಾಲ್ಕು ಅಕ್ಕತಂಗಿಯರು ಇಬ್ಬರು ಅಣ್ಣತಮ್ಮಂದಿರು. ಸಂಜೆವಾಣಿ ವರದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಸೈದಾ ಶೈಸ್ತಾ ಈ ನಾಲ್ಕು ಚಿನ್ನದ ಪದಕ ಪಡೆಯುವುದಕ್ಕೆ ನನ್ನ ತಂದೆ-ತಾಯಿ ಹಾಗೂ ಶಿಕ್ಷಕರ ಸಹಕಾರದಿಂದ ಸಾಧ್ಯವಾಗಿದೆ. ಇದೇ ವಿಷಯದಲ್ಲಿ ಪೆÇ್ರಫೆಸರ್ ಆಗುವ ಆಕಾಂಕ್ಷಿಯಾಗಿದ್ದು ಬೇರೆ ಯಾವುದೇ ಹುದ್ದೆಗೆ ಇಚ್ಚಿಸುವುದಿಲ್ಲ. ಈ ಸಂದರ್ಭದಲ್ಲಿ ತಾಲೂಕಿನ ದಲಿತ ಮತ್ತು ಮೈನಾರಿಟಿ ಸೇನೆಯ ಅಧ್ಯಕ್ಷರಾದ ಎಂ ಡಿ ಸಲೀಂ ಲಶಕರಿ,ಇಮ್ರಾನ್, ಎಂಡಿ ಸಲ್ಮಾನ್, ಮುಂತಾದವರು ಇದ್ದರು.
ಸಂಜೆವಾಣಿ ಪತ್ರಿಕಾ ವರದಿಗಾರರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯ ಮನೆಗೆ ತೆರಳಿ ವಿದ್ಯಾರ್ಥಿನಿಗೆ ನೇತಾಜಿ ಸುಭಾಷ್ಚಂದ್ರಬೋಸ್ ಜೀವನ ಚರಿತ್ರೆ ಪುಸ್ತಕ ಹಾಗೂ ಸಂಜೆವಾಣಿ ಪತ್ರಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.