ಸರ್ಕಾರಿ ಶಾಲೆಯಲ್ಲಿ ಕನ್ನಡ ಜಾಗೃತಿ ಅಭಿಯಾನ

ಚಿತ್ರದುರ್ಗ.ನ.೨೩; ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು,ಕನ್ನಡದ ಜಾಗೃತ ಸಮಿತಿ ಚಿತ್ರದುರ್ಗ,ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಚಿತ್ರದುರ್ಗ  ವತಿಯಿಂದ  ಏರ್ಪಡಿಸಲಾಗಿದ್ದ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಾಹಿತಿ ಹಾಗೂ  ಉಪನ್ಯಾಸಕರಾದ ಡಾ.ಎಸ್ ಎಸ್ ಶಫಿವುಲ್ಲಾ ಉದ್ಘಾಟಿಸಿದರು. ನಂತರ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ  ಓದುತ್ತಿರುವ ಮಕ್ಕಳಿಗೆ  ಸಾಮಾನ್ಯಜ್ಞಾನ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಲಿಯುವ ಮಕ್ಕಳು ಜೀವನದಲ್ಲಿ ಏದುರಾಗುವ ಸಂದಿಗ್ಧ  ಸನ್ನಿವೇಶಗಳನ್ನು ಏದುರಿಸುವ ಹಾಗೂ ಹೊಂದಿಕೊಳ್ಳುವ ಕೌಶಲಗಳನ್ನು  ಪಡೆಯುತ್ತಾರೆ ಎಂದರು.ಮಕ್ಕಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.ಇದರಿಂದ ತಮ್ಮ ಪ್ರತಿಭೆ ದ್ವಿಗುಣವಾಗುತ್ತದೆ ಎಂದರು.ಕೆಲವು ಇಂಗ್ಲೀಷ್ ಪದಗಳಿಗೆ ಕನ್ನಡದ ಪರ್ಯಾಯಪದಗಳನ್ನು ಕುರಿತು ಮಾತನಾಡಿದರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮತ್ತು ಕನ್ನಡ ಜಾಗೃತ ಸಮಿತಿ ಕಾರ್ಯವೈಖರಿಗಳನ್ನು ಶ್ಲಾಘಿಸಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಲ್ಲಿ ಜಾಗೃತ ಸಮಿತಿ ಸದಸ್ಯರಾದ ಶ್ರೀಮತಿ ದಯಾ ಪುತ್ತೂರ್ಕರ್  ನವೆಂಬರ್ ತಿಂಗಳಲ್ಲಿ ಜಿಲ್ಲಾದ್ಯಂತ ಹಲವು ಶಾಲೆ ಕಾಲೇಜ್‌ ಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಏಕೆ ಮಾಡಿಕೊಂಡು ಬರುತ್ತಿದ್ದೇವೆ ಎಂಬುದನ್ನು ಕುರಿತು ಮಕ್ಕಳಿಗೆ ತಿಳಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರಿಚಯ ಮಾಡಿ ಅದರ ಅಧ್ಯಕ್ಷ ಶ್ರೀಯುತ ನಾಗಭರಣರವರನ್ನು ಕುರಿತು ಮಾತನಾಡಿದರು.ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಏರ್ಪಡಿಸುವ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು.ವಿಜೇತರಿಗೆ ಸರ್ಕಾರದ ಪ್ರಮಾಣದ ಪತ್ರಗಳನ್ನು ನೀಡಿ ಗೌರವಿಸಲಾಗುವುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆ.ಎಸ್ ರಾಜೇಶ್ವರಿ,ತೀರ್ಪುಗಾರರಾಗಿ ಎಂ ಸಿದ್ದಮ್ಮ ಹಾಗೂ ದೇವರಾಜ್ ರವರು ಭಾಗವಹಿಸಿದ್ದರು. ಹಲವು ವಿದ್ಯಾರ್ಥಿಗಳು ಆಶುಭಾಷಣ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.ಸ್ಪರ್ಧೆಯಲ್ಲಿ ಆಯಿಷಾ ಭಾನು ಪ್ರಥಮ , ಗೋಪಿಕಾ ಶ್ರೀ ದ್ವೀತಿಯ,ರಚನಾ ತೃತೀಯ  ಹಾಗೂ ಸಂಪತ್  ಸಮಾಧಾನಕರ ಸ್ಥಾನಗಳಲ್ಲಿ ವಿಜೇತರಾದರು.ಜಿ.ಎನ್ ಸ್ವರೂಪ ಸ್ವಾಗತಿಸಿದರು. ಎಂ ಸಿದ್ದಮ್ಮ ನಿರೂಪಿಸಿದರು .

Attachments area