ಸರ್ಕಾರಿ ಶಾಲೆಗೆ ಸೌಲಭ್ಯ ಒದಗಿಸಿ

ವಾಡಿ:ನ.21: ಪಟ್ಟಣ ಸಮೀಪದ ಲಾಡ್ಲಾಪೂರ ಗ್ರಾಮದಲ್ಲಿ ಕಳೆದ ವರ್ಷ ನಿರ್ಮಾಣವಾದ ಸರ್ಕಾರಿ ಪ್ರೌಢ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಎಐಡಿಎಸ್‍ಓ ಸಂಘಟನೆ ವತಿಯಿಂದ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಲಾಯಿತ್ತು.

ನೂತನ ಕಟ್ಟಡ ನಿರ್ಮಾಣವಾಗಿ ಸ್ಥಳಾಂತರಗೊಂಡ ವಿದ್ಯಾಶಾಲೆಯಲ್ಲಿ ಕರೆಂಟ್ ಇಲ್ಲದೇ ಕಂಪ್ಯೂಟರ್ ಪಾಳು ಬಿದ್ದಿವೆ. ಸ್ವಾತಂತ್ರ ಲಭಿಸಿ ದಶಕಗಳೇ ಕಳೆದರು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹೆಣ್ಣು ಮಕ್ಕಳು ಬಯಲಲ್ಲಿ ಶೌಚಾಲಯ ಮಾಡಬೇಕಾಗಿರುವ ಜಲ್ವಂತ ಸಮಸ್ಯೆ ಇದೆ. ವಿಧ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ, ಸೂಕ್ತ ರಸ್ತೆಯಿಲ್ಲ. ಕಂಪೌಂಡ ಇಲ್ಲದ ಕಾರಣ ಶಾಲಾ ಆವರಣ ಕುಡುಕರ ತಾಣವಾಗುತ್ತಿದೆ. ಶಾಲೆ ಆರಂಭಗೊಳ್ಳುವ ಮುನ್ನವೇ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ವಿಳಂಬ ಮಾಡಿದಲ್ಲಿ ಹೆದ್ದಾರಿ ತಡೆದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಐಡಿಎಸ್‍ಓ ವಾಡಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಅರುಣ ಹಿರೇಬಾನರ್, ದತ್ತಾತ್ರೇಯ ಹುಡೇಕರ್, ಗೋವಿಂದ ಯಳವಾರ ಎಚ್ಚರಿಸಿದ್ದಾರೆ.