ಸರ್ಕಾರಿ ಶಾಲೆಗೆ ಸಿಇಓ ದಿಢೀರ್ ಭೇಟಿ : ಕೋವಿಡ್ ಮಾರ್ಗಸೂಚಿ ಪಾಲನೆ ಪರಿಶೀಲನೆ

ಶಿವಮೊಗ್ಗ, ಏ. 2: ನಗರದ ದುರ್ಗಿಗುಡಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ,
ಪ್ರೌಢಶಾಲೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಎಂ.ಎಲ್.ವೈಶಾಲಿರವರು ದಿಢೀರ್ ಭೇಟಿಯಿತ್ತು, ಕೋವಿಡ್ ಮಾರ್ಗಸೂಚಿ ಪಾಲನೆಯ ಕುರಿತಂತೆ
ಪರಿಶೀಲನೆ ನಡೆಸಿದರು.ಶಾಲೆಯ ಪ್ರತಿಯೊಂದು ಕೊಠಡಿಗೂ ಅವರು ಭೇಟಿಯಿತ್ತು ತಪಾಸಣೆ ನಡೆಸಿದರು. ಈ ವೇಳೆ ಕೆಲ
ವಿದ್ಯಾರ್ಥಿಗಳು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವೂ
ಕಾಯ್ದುಕೊಳ್ಳದಿರುವುದು ಬೆಳಕಿಗೆ ಬಂದಿತು.
ಈ ಬಗ್ಗೆ ಸಿಇಓರವರು ಸಂಬಂಧಿಸಿದ ಶಿಕ್ಷಕರನ್ನು ಪ್ರಶ್ನಿಸಿ, ಅಸಮಾಧಾನ
ವ್ಯಕ್ತಪಡಿಸಿದರು. ಶಾಲೆಯಲ್ಲಿ ಸಮರ್ಪಕವಾಗಿ ಕೋವಿಡ್ ನಿಯಮಾವಳಿಗಳ ಪಾಲನೆ ಮಾಡುವಂತೆ
ತಾಕೀತು ಮಾಡಿದರು.

ಪ್ರತಿಯೋರ್ವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದನ್ನು
ಖಚಿತಪಡಿಸಿಕೊಳ್ಳಬೇಕು. ಕೊಠಡಿಯಲ್ಲಿ ಸಾಮಾಜಿಕ ಅಂತರ ಪರಿಪಾಲನೆ ಬಗ್ಗೆ
ಗಮನಹರಿಸುವಂತೆ ಶಿಕ್ಷಕರಿಗೆ ಸೂಚಿಸಿದರು.