ಸರ್ಕಾರಿ ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

ಹರಿಹರ.ಡಿ 1;  ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಹಿರಿಯರಾದ  ಸಿದ್ದಪ್ಪ ಕುಂಚೂರು ಅವರು 18 ಸಾವಿರ ರೂಪಾಯಿಗಳ ಧ್ವನಿವರ್ಧಕ ಹಾಗೂ ಉಮೇಶ್ ಕುಂಚೂರು  30 ಸಾವಿರ ರೂಪಾಯಿಗಳ ಲ್ಯಾಪ್ ಟಾಪ್  ಕೊಡುಗೆಯಾಗಿ ನೀಡಿದ್ದಾರೆ ಬಡ ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮವಾದಂಥ ಕೊಡುಗೆಯನ್ನು ನೀಡಿದ್ದಾರೆ ಇವರು ಬೇರೆಯವರಿಗೆ ಮಾದರಿಯಾಗುವಂಥ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ನಮ್ಮ ಶಾಲೆಯ ಶಿಕ್ಷಕ ವೃಂದದವರು ಎಸ್ಡಿಎಂಸಿ ಅಧ್ಯಕ್ಷರು ಪದಾಧಿಕಾರಿಗಳು ಊರಿನ ಗ್ರಾಮಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಈ ಬಸವರಾಜಪ್ಪ ಹೇಳಿದರುಈ ವೇಳೆ  ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಿಕ್ಷಣ ಸಂಯೋಜಕರಾದ ತಿರ್ಥಪ್ಪ, ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚೆನ್ನಕೇಶವ ಕಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘ ಹರಿಹರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಂಜಪ್ಪ ಡಿಟಿ, ಗ್ರಾಮದ ನಿವೃತ್ತ ಶಿಕ್ಷಕರಾದ ಎಸ್ ನಿಜಲಿಂಗಪ್ಪ, ಹಾಗೂ ವಿರುಪಾಕ್ಷಪ್ಪ ಗೌಡರ್  ರವರೆಗೂ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಎಸ್ ಡಿಎಂಸಿ  ಅಧ್ಯಕ್ಷರಾದ ಎಸ್ ನಿಜಲಿಂಗಪ್ಪ, ದಾನಿಗಳಾದ ಸಿದ್ದಪ್ಪ ಕುಂಚೂರ್, ಹಾಗೂ ಉಮೇಶಪ್ಪ ಕುಂಚೂರ್, ಗ್ರಾಮದ ಹಿರಿಯರಾದ ಡಿಕೆ ಹಾಲನಗೌಡ, ಕೆಜಿ ಶಿವಣ್ಣ,ತಿಪ್ಪಣ್ಣ ಗೌಡ್ರು, ಉಮೇಶಪ್ಪ,ರಾಮನಗೌಡ, ಮಲ್ಲಿಕಾರ್ಜುನ ಜಿ, ಶಿವಮೂರ್ತಪ್ಪ,   ಶರಣ್ ಕುಮಾರ್ ಹೆಗಡೆ, ಉಮೇಶಯ್ಯ, ಮಂಗಳ, ಲೈಕ ಬಾನು,ಹೇಮ ಟಿವಿ,ರಶ್ಮಿ, ಸೌಮ್ಯ,ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು Attachments areaReplyReply to allForward