ಸರ್ಕಾರಿ ಶಾಲೆಗೆ ಮೂಲ ಸೌಕರ್ಯಗಳಿಗೆ ಒತ್ತಾಯ

ಸಿರವಾರ,ಆ.೧೭-
ತಾಲೂಕಿನ ಬಾಗಲವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಲಭೂತ ಸೌಕರ್ಯ ಸೌಕರ್ಯಗಳ ಕೊರತೆ ಇದ್ದು, ಸೂಕ್ತವಾದ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಲೆಯ ಮುಖ್ಯಗುರುಗಳ ಜೊತೆಗೆ ಶಿಕ್ಷಣ ಪ್ರೇಮಿಗಳು, ನಾಗರಿಕರು ಮತ್ತು ವಿವಿಧ ಸಂಘಟನೆಗಳು ಮುಖಂಡರು ಮನವಿ ಸಲ್ಲಿಸಿದರು.
ಶಾಲೆಯಲ್ಲಿ ಶಿಕ್ಷಣದ ಬೆಳವಣಿಗೆ ಸಂಪೂರ್ಣ ಕುಂಠಿತ ಗೊಂಡಿದೆ. ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬರುವುದಿಲ್ಲ. ಶಿಕ್ಷಕರ ಕೊರತೆಯಿದೆ. ೪೬೧ ವಿದ್ಯಾರ್ಥಿಗಳಿದ್ದು, ಕೇವಲ ೧೦ಜನ ಶಿಕ್ಷಕರಿದ್ದಾರೆ.
ಮುಖ್ಯ ಗುರುಗಳಿಗೆ ಬ್ಯಾಗವಾಟ್ ಮತ್ತು ಬಾಗಲವಾಡ ಎರಡು ಶಾಲೆಗಳ ಜವಾಬ್ದಾರಿ ಇದೆ.
ವಿಜ್ಞಾನ ಮತ್ತು ಇಂಗ್ಲಿಷ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಕೊರತೆ ಇದೆ. ಕೂಡಲೇ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಈ ವೇಳೆ ಮಲ್ಲನಗೌಡ ಪೋಲಿಸ್ ಪಾಟೀಲ್, ಎಸ್ ಡಿಎಂಸಿ ಅಧ್ಯಕ್ಷ ಯಂಕೋಬ ನಾಯಕ, ಬಸವರಾಜ್ ದ್ಯಾವಣ್ಣರು,ಗಂಗಾಧರ ಬಾಗಲವಾಡ, ಮೌನೇಶ ಕೋರಿ, ನಾಗರಾಜ್ ಹಿಂದಿನಮನೆ, ಜಗದೀಶ ಸಾಲಮನಿ ,ಮೌಲಸಾಬ್, ನಾಗರಾಜ್ ಭೋವಿ, ಚನ್ನಮಲ್ಲಯ್ಯ ಇದ್ದರು.