ಸರ್ಕಾರಿ ಶಾಲೆಗೆ ಕಲಿಕೋಪಕರಣಗಳ ದೇಣಿಗೆ

ಸಿರುಗುಪ್ಪ ಜ 14 : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಪಿ.ಕೇರಿ) ಶಾಲೆಯಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪೇದೆ ಯು.ಗೋವಿಂದ ಲಲಿತ ದಂಪತಿಯ ಮೊದಲನೇ ಮಗ ಯು.ಹೃತ್ವಿಕ್ ಅವರ 5ನೇವರ್ಷದ ಹುಟ್ಟು ಹಬ್ಬದ ಅಂಗವಾಗಿ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯ ನಿಮಿತ್ತವಾಗಿ ಶಾಲೆಯ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸುವ 20ಸಾವಿರದ ಮೌಲ್ಯದ ರ್ಯಾಕ್ ಪೀಠೋಪಕರಣಗಳನ್ನು ದೇಣಿಗೆಯನ್ನು ನೀಡುವ ಮೂಲಕ ಮಗನ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ನಂತರ ಶಾಲಾ ಆವರಣದಲ್ಲಿ ಪ್ರತಿ ವರ್ಷದಂತರ ಸಸಿಯನ್ನು ನೆಟ್ಟು ನೀರು ಹಾಕಿ ಸಂಭ್ರಮಿಸಿದರು ಎಂದು ಶಾಲೆಯ ಮುಖ್ಯ ಗುರು ಶಿವಾಚಾರ್ಯ ತಿಳಿಸಿದರು. ಇದೆ ವೇಳೆ ಶಾಲೆಯ ಸಹಶಿಕ್ಷಕರಾದ ರಾಧಮ್ಮ, ರೇಖಾ, ಟಿ.ಸಿದ್ದಯ್ಯ ಇದ್ದರು.