ಸರ್ಕಾರಿ ಶಾಲೆಗೆ ಉಚಿತ ಕಂಪ್ಯೂಟರ್, ಕಲಿಕಾ ಸಾಮಾಗ್ರಿ ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು:ಜು: 13:  ಕಲಿಕೆ ನಿರಂತರವಾಗಿರಬೇಕು ಅದು ಉತ್ತಮವಾಗಿರಬೇಕು ಎನ್ನುವ ಮಹತ್ತರ ಉದ್ದೇಶದಿಂದ ಡಾ. ಪುನೀತ್‍ರಾಜಕುಮಾರ್ ಅಭಿಮಾನಿಬಳಗದ ಯುವಕರು ಮಕ್ಕಳಿಗೆ ಉಚಿತವಾಗಿ ಕಲಿಕಾ ಪರಿಕರಗಳನ್ನು ವಿತರಿಸುತ್ತಿರುವುದು ಉತ್ತಮ ಕಾರ್ಯವಾಗಿದ್ದು ಮಕ್ಕಳಿಗೆ ಹೆಚ್ಚಿನ ಉತ್ಸಾಹದಿಂದ ಕಲಿಯಲು ಸಹಕಾರಿಯಾಗಿದೆ ಎಂದು ಮುಖ್ಯಗುರುಗಳಾದ ಅರುಂಧತಿ ತಿಳಿಸಿದರು.
ಅವರು  ಪಟ್ಟಣದ ವಿರಕ್ತಮಠದ ಹತ್ತಿರದ 6ನೇವಾರ್ಡನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಪುನೀತ್ ರಾಜಕುಮಾರ ಅಭಿಮಾನಿ ಬಳಗದವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪುನೀತ್ ರಾಜಕುಮಾರ ಅವರು ಕಾಣದ ರೀತಿಯಲ್ಲಿ ಸೇವೆಯನ್ನು ಮಾಡಿ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ, ಅವರ ಹೆಸರಿನಲ್ಲಿ ಅವರ ಬಳಗದ ಅಭಿಮಾನಿಗಳು ಇಂತಹ ಸೇವಾ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ಮಾಡುತ್ತಿರುವುದು ಮಕ್ಕಳಿಗೂ ಸಹ ಸೇವೆಯ ಗುಣವನ್ನು ಬೆಳೆಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಾಲೆಗೆ ಒಂದು ಕಂಪ್ಯೂಟರ್, ಮಕ್ಕಳಿಗೆ ಉಚಿತವಾಗಿ ನೋಟ್‍ಪುಸ್ತಕಗಳು, ಬರೆಯುವ ಪ್ಯಾಡ್, ಟೈ, ಬೆಲ್ಟ್, ಯೋಜನಾ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಮಕ್ಕಳಿಗೆ ನೀಡಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಿ.ಅರ್.ಪಿ ಜಕಣಾಚಾರಿ, ಸಿ.ಅರ್.ಪಿ. ಮಂಜುಶ್ರೀ, ಪ್ರಭಾಕರ್ ಭಟ್( ನಿವೃತ್ತ ಶಿಕ್ಷಕರು, ಕಿರಣ್ ಕುಮಾರ್ ವಂದಿಸಿದರು, ಜಿ.ಅರ್. ರೇಣುಕಮ್ಮ ಸ್ವಾಗತಿಸಿದರು,