ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ

ಕೆ.ಆರ್.ಪೇಟೆ. ಮೇ.30:- ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಕೆಪಿಎಸ್ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಸೋಮವಾರ ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯ ಪೆÇೀಷಕರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಮಕ್ಕಳ ದಾಖಲಾತಿಗೆ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯಬೇಕಾಗಿದ್ದು ಟೋಕನ್ ಪಡೆಯಲು ಪೆÇೀಷಕರು ಮುಂಜಾನೆ 05 ಘಂಟೆಗೆ ಶಾಲೆಯ ಗೇಟ್ ಮುಂದೆ ಕಾದು ಕುಳಿತಿದ್ದರು.
ಪಟ್ಟಣದ ಹೃದಯ ಭಾಗದಲ್ಲಿ ಶತಮಾನದ ಸರ್ಕಾರಿ ಶಾಲೆಯಿದೆ. ಡೊನೇಷನ್ ಮಾಫಿಯಾದಿಂದ ನಲುಗುತ್ತಿರುವ ಶಿಕ್ಷಣ ಕ್ಷೇತ್ರವನ್ನು ಸರಿಪಡಿಸಲು ಕಳೆದ ಒಂದು ದಶಕದ ಹಿಂದೆ ಪಟ್ಟಣದ ಶಿಕ್ಷಣಾಸಕ್ತರು ಮನಸ್ಸು ಮಾಡಿದರು. ಇದಕ್ಕೆ ಅಂದಿನ ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ಪ್ರಸ್ತುತ ಮಂಡ್ಯ ಜಿಲ್ಲಾ ಸ್ಥಾನಿಕ ಜಿಲ್ಲಾಧಿಕಾರಿಯಾಗಿರುವ ಡಾ. ಹೆಚ್.ಎಲ್.ನಾಗರಾಜು ನೇತೃತ್ವ ವಹಿಸಿದ್ದರು. ಅನಂತರ ಚಲನಚಿತ್ರ ನಟ ಪ್ರಕಾಶ್ ರಾಜ್ ಕೂಡ ಕೈಜೋಡಿಸಿದರು.
ಪರಿಣಾಮ ಮುಚ್ಚಿ ಹೋಗುವ ಹಂತದಲ್ಲಿದ್ದ ಪಟ್ಟಣದ ಸರ್ಕಾರಿ ಶಾಲೆ ಇದೀಗ ಖಾಸಗೀ ಖಾಲೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಖಾಗೀ ಶಾಲೆಗಳ ಮಾದರಿಯಲ್ಲಿಯೇ ಆಕರ್ಷಕ ಸಮವಸ್ತ್ರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಈ ಶಾಲೆಯಲ್ಲಿ ನಡೆಯುತ್ತಿವೆ. ಇದರ ಅಭಿವೃದ್ದಿಗೆ ಹತ್ತು ಹಲವು ದಾನಿಗಳು ಕೈಜೋಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಕ್ಕಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆ ಕಂಡಿದೆ. ಪಟ್ಟಣದ ಹಲವು ಖಾಸಗಿ ಶಾಲೆಗಳಿಗೆ ಪೈಪೆÇೀಟಿ ನೀಡುತ್ತಿದ್ದು ಇಲ್ಲಿ ಉತ್ತಮವಾಗಿ ಶಿಕ್ಷಣ ನೀಡಲಾಗುತ್ತಿದೆ.
ಇದರ ಪರಿಣಾಮವಾಗಿಯೇ ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಕೆಲವೇ ಸೀಟುಗಳು ಲಭ್ಯವಿರುವ ಹಿನ್ನೆಲೆಯಲ್ಲಿ ಪೆÇೀಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಲು ರಾಜಕಾರಣಿಗಳಿಂದ ಶಿಫಾರಸ್ಸು ಮಾಡಿಸುವ ಹಂತಕ್ಕೆ ಸರ್ಕಾರಿ ಶಾಲೆ ಬೆಳೆದಿದ್ದು ಉತ್ತಮ ಪರಿಸರದಲ್ಲಿರುವ ಹಾಗೂ ಪಟ್ಟಣದ ಹೃದಯಭಾಗದಲ್ಲಿರುವ ಈ ಶಾಲೆಗೆ ನೂರಾರು ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಸರ್ಕಾರಿ ಶಾಲೆಯ ಬಲವರ್ದನೆಯನ್ನು ತೋರಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವತಂತ್ರವಾಗಿದ್ದ ಈ ಸರ್ಕಾರಿ ಶಾಲೆ ಇದೀಗ ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತಕ್ಕೆ ಸೇರಿದ್ದು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪಿ.ಯು.ಸಿ ವರೆಗೆ ಒಂದೇ ಸೂರಿನ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣ ದೊರಕುತ್ತಿದೆ.
ಖಾಸಗಿ ಶಾಲೆಗಳಿಗೆ ಸಾವಿರಾರು ರೂಪಾಯಿ ಡೊನೇಷನ್ ನೀಡಿ ತಮ್ಮ ಮಕ್ಕಳನ್ನು ದಾಖಲಿಸುವುದಕ್ಕಿಂತ ಎಲ್ಲಾ ಸೌಲಭ್ಯಗಳಿರುವ ಸರ್ಕಾರಿ ಶಾಲೆಗೆ ಸೇರಿಸಲು ಪೆÇೀಷಕರು ಮನಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಪೆÇೀಷಕರು ಕೆ.ಆರ್.ಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಕೆಪಿಎಸ್ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ರಾತ್ರಿಯಿಂದಲೇ ಸಿದ್ದತೆಮಾಡಿಕೊಂಡು ಮುಂಜಾನೆ ಐದು ಗಂಟೆಯಿಂದಲೇ ಪೆÇೀಷಕರು ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯಲು ಕಾಯುತ್ತಿರುವುದನ್ನು ಗಮನಿಸಿದರೆ ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಸಾರಿ ಹೇಳುತ್ತಿದೆ.
ಕೆ.ಪಿ.ಎಸ್ ಶಾಲೆಯ ಪ್ರಾಂಶುಪಾಲ ಡಿ.ಬಿ.ಸತ್ಯ ಪ್ರತಿಕ್ರಿಯಿಸಿ ಇಲ್ಲಿನ ಶಿಕ್ಷಕ ವರ್ಗ ಉತ್ತಮವಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗೆ ಕಳೆದ ಬಾರಿ ಎಲ್.ಕೆ.ಜಿಯಿಂದ ದ್ವಿತೀಯ ಪಿಯುಸಿವರೆಗೆ ಎರಡು ಸಾವಿರದ ನೂರೈವತ್ತು ಮಕ್ಕಳು ದಾಖಲಾಗಿ ರಾಜ್ಯದಲ್ಲಿಯೇ ಉತ್ತಮವಾದ ಶಾಲೆ ಎಂಬ ಹೆಸರಿಗೆ ಭಾಜನವಾಗಿತ್ತು. ಈ ಬಾರಿಯೂ ಹೆಚ್ಚಿನ ಪೆÇೀಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲು ಮಾಡಲು ಮುಂದೆ ಬಂದಿರುವುದು ಸಂತಸದ ವಿಷಯವಾಗಿದೆ ಎಂದಿದ್ದಾರೆ.