ಸರ್ಕಾರಿ ಶಾಲೆಗಳಿಗೆ ಥರ್ಮಲ್ ಸ್ಕ್ಯಾನರ್ ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ

ಕೊಟ್ಟೂರು ಜ3 : ಗ್ರಾಮಪಂಚಾಯಿತಿಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಆಯೋಗದಿಂದ ಒದಗಿಸಲಾದ ಹಾಗೂ ಉಪಯೋಗಿಸಿದ ಥರ್ಮಲ್ ಸ್ಕ್ಯಾನರ್ ತಾಲೂಕಿನ ಸರ್ಕಾರಿ ಶಾಲೆಗಳಿಗೆ ನೀಡುವಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಹಶೀಲ್ದಾರ ಜಿ.ಅನಿಲ್ ಕುಮಾರ್ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಿದ್ಯಾಗಮ2ನಿರಂತರ ಕಲಿಕಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಶಾಲೆಗೆ ಆಗಮಿಸುವ ಮಕ್ಕಳಿಗೆ ಸ್ಕ್ಯಾನರ್ ಮೂಲಕ ಆರೋಗ್ಯತಪಾಸಣೆ ಅನೂಕರವಾಗಲಿದೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ.ಸಿದ್ದಲಿಂಗಪ್ಪ ಹೇಳಿದರು.
ಈ ಸಂದರ್ಭದಲ್ಲಿ ಜಿ.ಸಿದ್ದಪ್ಪ, ಕೆ.ಶಶಿಕಲಾ, ಗಂಗಮ್ಮ. ಜಿ, ಮುತ್ತೇಶ.ಬಿ, ಈಶ್ವರಪ್ಪ ತುರುಕಾಣಿ ಸೇರಿದಂತೆ ಆನೇಕರಿದ್ದರು.