
ಮಾಲೂರು,ಆ.೨೪-ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ವಸಂತಪ್ಪ ಅವರು ತಾಲೂಕಿನ ನೊಸಗೆರೆ, ಚಿಕ್ಕಾಪುರ, ಹುರಳಗೆರೆ, ಪಟ್ಟಣದ ಪಟಾಲಮ್ಮ ಹಾಗೂ ಕುಂಬಾರಪೇಟೆ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಸರಕಾರ ಹಾಗೂ ದಾನಿಗಳ ಸಹಕಾರದಿಂದ ನಡೆಯುತ್ತಿರುವ ಶಾಲಾ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ಪದ್ಮ ಬಸವಂತಪ್ಪ ಅವರು ಪಟ್ಟಣದ ಕುಂಬಾರಪೇಟೆ ಹಾಗೂ ಪಟಾಲಮ್ಮ ಶಾಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡವು ಗುಣಮಟ್ಟದಿಂದ ಕೂಡಿದ್ದು, ತಾಲೂಕಿನ ನೊಸಗೆರೆ ಪಂಚಾಯಿತಿಯ ಚಿಕ್ಕಾಪುರ, ಹುರಳಗೆರೆ, ಮಾರಸಂದ್ರ, ಗ್ರಾಮಗಳ ಸರಕಾರಿ ಶಾಲೆಗಳಿಗೂ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಲಾಗಿದೆ.
ಮಾರಸಂದ್ರ ಗ್ರಾಮದ ಬಳಿ ಇರುವ ಡೆಕಾಥ್ಲಾನ್ ಕ್ರೀಡಾ ಸಂಸ್ಥೆಗೆ ಭೇಟಿ ನೀಡಿ ಈ ಸಂಸ್ಥೆಯು ಸಿಎಸ್‌ಆರ್ ಅನುದಾನದಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಿಸಿ ಕೊಡುವುದು ಜಿಲ್ಲೆಯ ಸರಕಾರಿ ಶಾಲೆಗಳಿಗೆ ಕ್ರೀಡಾ ಉಪಕರಣಗಳನ್ನು ನೀಡುವುದರ ಬಗ್ಗೆ ಚರ್ಚಿಸಲಾಗಿದೆ. ಮಾಲೂರು ತಾಲೂಕಿಗೆ ಸರಕಾರದಿಂದ ೨೦ ವಿವೇಕ ಶಾಲೆಗಳು ಮಂಜೂರಾಗಿದ್ದು ಮಾರಸಂದ್ರ, ಪಟ್ಟಣದ ಕುಂಬಾರಪೇಟೆ ಪಟಾಲಮ್ಮ ಶಾಲೆಗಳಲ್ಲಿ ತಲಾ ಒಂದು ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ, ಕಾಮಗಾರಿ ನಡೆಯುವ ವೇಳೆ ಶಿಕ್ಷಕರು ಸ್ಥಳದಲ್ಲಿಯೇ ಹಾಜರಿದು ಗುಣಮಟ್ಟದ ಕಾಮಗಾರಿಯನ್ನು ಪಡೆಯುವಂತೆ ಹೇಳಿದರು.