ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಮನವಿ

ಚಿತ್ರದುರ್ಗ.ಜ.೨: ವದ್ಧೀಕೆರೆ ಗ್ರಾಮದ ಹಸಿರು ತೋರಣಗಳಿಂದ ಅಲಂಕೃತವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಹಿರಿಯೂರಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ  ರಾಮಯ್ಯ  ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಶಾಲೆಗಳಲ್ಲಿ ಗುಣಮಟ್ಟವನ್ನು ಕಾಪಾಡಬೇಕು, ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಪಾಡುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್‌ನ್ನು ಬಳಸಬೇಕು. ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನಗಮನ ಹರಿಸುವುದರ ಜೊತೆಗೆ ಪೋಷಕರಿಗೆ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಬೇಕು.  ವಿದ್ಯಾರ್ಥಿಗಳಿಗೆ ಬಿಸಿನೀರು ಮತ್ತು ಸ್ವಚ್ಚತೆಯನ್ನು ಕಾಪಾಡುವುದರ ಜೊತೆಗೆ ಕೋರೋನಾ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಿದರು.  ಈ ಸಂದರ್ಭದಲ್ಲಿ ಶಾಲೆಗೆ ಸಾಮಗ್ರಿಗಳು ಮತ್ತು ಸ್ಯಾನಿಟೈಸರ್, ಮಾಸ್ಕ್ಗಳನ್ನು ಕೊಡಿಸಿರುವ ಓಂಕಾರಮೂರ್ತಿ, ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮತ್ತು ಎಂ.ಗಿರಿ ಸುವರ್ಣಮ್ಮ ರವರಿಗೆ ಅಭಿನಂದಿಸಿದರು. ಕಾಂತಣ್ಣ, ವಕೀಲರು ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ನಾಯಕರು ಮತ್ತು ಈ ಗ್ರಾಮದಿಂದ ಬಹುಮುಖಿ ಪ್ರತಿಭೆಯನ್ನು ಗುರುತಿಸಿ ಗ್ರಾಮಕ್ಕೆ ಹೆಸರು ತರುವಂತೆ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಆಗ ಮಾತ್ರ ಗ್ರಾಮಕ್ಕೆ ಮತ್ತು ಶಾಲೆಗೂ ಒಳ್ಳೆಯ ಹೆಸರು ಬರುತ್ತದೆ.  ಹೊಸ ವರ್ಷ ನಿಮಗೆ ಹರುಷ ತರಲಿ ಎಂದು ಹಾರೈಸುತ್ತೇನೆ.ಪ್ರತಾಪ್‌ಜೋಗಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಆತ್ಮಸ್ಥೈರ್ಯ ಹೆಚ್ಚಿರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರುಗಳು ಅವರ ಭೌತಿಕ ಮಟ್ಟವನ್ನು ಗುರುತಿಸಿ ಯಾವ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚು ಒಲವು ತೋರುತ್ತಾರೆ ಆ ಕ್ಷೇತ್ರವನ್ನು ಗುರುತಿಸಿ ಅವರಿಗೆ ಹೆಚ್ಚು ಒತ್ತು ನೀಡುವುದು.  ವದ್ಧೀಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಚಿತ್ರದುರ್ಗ ಜಿಲ್ಲೆ ತಿರುಗಿ ನೋಡುವಂತೆ ಹೆಸರು ತರುವಂತೆ ಮಾಡಬೇಕು, ವಿದ್ಯಾರ್ಥಿಗಳು ನಮ್ಮ ಗ್ರಾಮದಿಂದ ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಆಗಲೀ ಎಂದು ಹಾರೈಸಿದರು.  ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಚೇತನ್‌ಕುಮಾರ್, ಓಂಕಾರಮೂರ್ತಿ, ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್, ವೀರೇಶ್, ಹರೀಶ್, ರವೀಶ್, ಸಂಯೋಜಕರು, ನಿರಂಜನ್, ಗ್ರಾ.ಪಂ. ಸದಸ್ಯರು, ತಿಪ್ಪೇಸ್ವಾಮಿ ಇದ್ದರು.