(ವಿಶೇಷ ಲೇಖನ-ಬಿಜನಳ್ಳಿ ಸುರೇಶ್)
ಸೇಡಂ,ಜೂ,09: ಅನ್ನ ನೀಡುವ ದೇವರು ರೈತನ ಆದರೆ ಜ್ಞಾನಾರ್ಜನೆ ನೀಡುವ ದೇವಾಲಯ ಶಾಲೆಗಳು, ಶಾಲೆಗಳು ಪ್ರಾರಂಭವಾಗಿದೆ ಆದರೂ ಜ್ಞಾನ ದೇಗುಲದ ಒಳಗೆ ಕೆಲವು ಗ್ರಾಮಗಳಲ್ಲಿ ಶಾಲೆಯ ಆವರಣಗಳಲ್ಲಿ ಕುಡುಕರು ಬೀರುಗಳನ್ನು ಕುಡಿದು ಧೂಮಪಾನ ಮಾಡಿ ಅಲ್ಲೇ ಬಿಸಾಕಿ ಹೋಗುತ್ತಿರುವ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸರ್ಕಾರಿ ಶಾಲೆಯ ಗೌರವಕ್ಕೆ ದಕ್ಕೆ ತರುವಂತದ್ದು ಆಗುತ್ತಿದೆ, ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಪೆÇಲೀಸ್ ಇಲಾಖೆಯವರು ಮುಂದಾಗಬೇಕಿದೆ, ಯಾವುದೇ ಗ್ರಾಮಗಳಲ್ಲಿ ಸರ್ಕಾರ ಶಾಲೆಗಳು ಕಲಿಕೆಗೆ ಮಾತ್ರ ಮಹತ್ವ ನೀಡಬೇಕಿದೆ ಅದರ ಜೊತೆಗೆ ಬೇರೆಯ ಚಟುವಟಿಕೆಗೆ ನೀಡಬಾರದಾಗಿದೆ. ಇಂತಹ ಚಟುವಟಿಕೆಗಳು ಕಂಡು ಬಂದರೆ ಗ್ರಾಮಸ್ಥರು ಮಾಹಿತಿ ನೀಡಬೇಕಿದೆ.
ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ರಾತ್ರಿ ಹೊತ್ತಲ್ಲಿ ಕುಡಿಯುವದರ ಜೊತೆಗೆ ಇನ್ನಿತರ ಚಟುವಟಿಕೆ ತೊಡೆಗಿಕೊಳ್ಳುತ್ತಿದ್ದಾರೆ ಕಡಿವಾಣ ಹಾಕಬೇಕಾಗಿದೆ.
ರಾಘವೇಂದ್ರ ವಾಲಿಕರ್
ಬೀರನಹಳ್ಳಿ ಗ್ರಾಮಸ್ಥ
ಸೇಡಂನಲ್ಲಿ ಬರುವಂತಹ ಸರ್ಕಾರಿ ಶಾಲೆಗಳಿಗೆ ಸರಿಯಾಗಿ ಶೌಚಾಲಯ ವ್ಯವಸ್ಥೆ ಇಲ್ಲ ಕ್ರೀಡಾಂಗಣ ವಿಲ್ಲ, ಮುಖ್ಯ ಗೇಟ್ನಲ್ಲಿ ಗೇಟುಗಳು ಸರಿಯಾಗಿ ಇಲ್ಲದೆ ಇರುವುದರಿಂದ ಪುಂಡಪೆÇೀಕರಿಗಳು ಶಾಲೆಗಳಲ್ಲಿ ಅವಾಂತರ ಸೃಷ್ಟಿಸುತ್ತಾರೆ , ಸಂಬಂಧಪಟ್ಟ ಇಲಾಖೆಯವರು ಎಚ್ಚರಗೊಳ್ಳಬೇಕಿದೆ.
ಶೇಖರ್ ನಾಟಿಕರ್ ಪ್ರಜಾ ಕಾರ್ಮಿಕ ಸೇಡಂ