| ಜಗಳೂರು.ಜು.೧೨; ಗ್ರಾಮೀಣ ಸರ್ಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಎಸ್ ಡಿ ಎಂಸಿ ಸಮಿತಿಯ ಪಾತ್ರ ಪ್ರಮುಖವಾಗಿದೆ ಸಿ.ಆರ್.ಪಿ ಮಂಜಣ್ಣ ಹೇಳಿದರು.ತಾಲೂಕಿನ ಕೆಳಗೋಟೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಸ್ ಡಿಎಂಸಿ ರಚನಾ ಸಭೆಯಲ್ಲಿ ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ನುರಿತ ಶಿಕ್ಷಕರಿಂದ ಉತ್ತಮ ಬೋಧನೆಯಿಂದ ಮಕ್ಕಳ ಕಲಿಕೆಯಲ್ಲೂ ಚೇತರಿಸಿಕೊಳ್ಳುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲಾ ಅಭಿವೃದ್ದಿಯೇ ಸಮಿತಿಯ ಮೂಲ ಉದ್ದೇಶವಾಗಿದೆ. ಸರ್ಕಾರದಿಂದ ಬರುವ ಯೋಜನೆಗಳು, ಕಟ್ಟಡ ಕಾಮಗಾರಿಗಳು, ಶೌಚಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಶಿಕ್ಷಕ ಟಿ. ಅಂಜಿನಪ್ಪ ಮಾತನಾಡಿ, 2018- 19ರಲ್ಲಿ ಸಮಿತಿ ರಚನೆಯಾಗಿತ್ತು. ಆದರೆ ಕರೊನಾ ಹಿನ್ನೆಲೆ ತಡವಾಗಿ ಸಭೆ ಕರೆದು ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.ಇದೀಗ ಹೊಸ ಸಮಿತಿಯ ಪದಾಧಿಕಾರಿಗಳು ಮಕ್ಕಳಹಕ್ಕುಗಳನ್ನು ಪರಿಣಾಮಕಾರಿಯಾಗಿ ನಿಬಾಯಿಸಲು ಮುಂದಾಗಬೇಕು ಎಂದರು.ಶಾಲೆಯಲ್ಲಿ ಎಸ್ಸಿ 29, ಎಸ್ಟಿ 90, ಮುಸ್ಲಿಂ 11, ಇತರೆ 46 ಸೇರಿದಂತೆ 176 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದ್ದು, 18 ಮಂದಿಯನ್ನು ಪೋಷಕ ಪ್ರತಿನಿದಿಗಳನ್ನು ಆಯ್ಕೆ ಮಾಡಲಾಗುವುದು, ಇದರಲ್ಲಿ ಎಸ್ಸಿ 3 , ಎಸ್ಟಿ 9, ಮುಸ್ಲಿಂ 1, ಇತರೆ 5, ಆಯ್ಕೆಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಪತ್ರಕರ್ತ ಲೋಕೇಶ್,ಗ್ರಾ.ಪಂ ಸದಸ್ಯ ಶಿವಕುಮಾರ್, ಮುಖಂಡ ನಾಗೇಂದ್ರಪ್ಪ, ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಜಿ. ನಾಗರಾಜ್, ಗ್ರಾ.ಪಂ ಮಾಜಿ ಸದಸ್ಯ ಬಸವರಾಜ್, ಷುಕುರ್ ಸಾಬ್, ಓಬಣ್ಣ,ಮಾಜಿ ಗ್ರಾಪಂ ಅಧ್ಯಕ್ಷೆ ಅಜ್ಜಯ್ಯ, ಕೃಷ್ಣಪ್ಪ, ಮಂಜಮ್ಮ.ವನಜಾಕ್ಷ, ಮಂಜುಳಾ, ಶಿಕ್ಷಕರಾದ ರಾಜಪ್ಪ,ಮಹೇಶ್ ಸೇರಿದಂತೆ ಮತ್ತಿತರಿದ್ದರು. | |