ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಪೆÇೀಷಕರ ಕರ್ತವ್ಯ : ಸಲ್ಲಾರೆ

ಕಲಬುರಗಿ:ಮಾ.2:ಸಂಜಯ ಗಾಂಧಿ ನಗರದ (ದುಬೈ ಕಾಲೋನಿ) ಚಕ್ರಕಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022 23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ದೇಶಿಸಿ ಸ್‍ಡಿಎಂಸಿ ಅಧ್ಯಕ್ಷ ಸೂರ್ಯಕಾಂತ್ ಸಲ್ಲಾರೆ ಮಾತನಾಡಿ ನಾನು ಮತ್ತು ನನ್ನ ಎಲ್ಲಾ ತಂಡದ ಎಸ್‍ಡಿಎಂಸಿ ಸದಸ್ಯರುಗಳು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಲ್ಲಾ ಪೆÇೀಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗೆ ಸೇರ್ಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಸರ್ಕಾರ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಬಟ್ಟೆ ಆಹಾರ ಸೇರದಂತೆ ಎಲ್ಲಾ ಸೌಲಭ್ಯಗಳು ನೀಡುತ್ತದೆ ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ನಮ್ಮ ಈ ಶಾಲೆಯಲ್ಲಿ ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದು ಜೊತೆಗೆ ನಮ್ಮ ಮಕ್ಕಳಿಗೆ ಆಟವಾಡಲು ಶಾಲಾ ಆಟದ ಮೈದಾನದ ಕೊರತೆ ಇದ್ದು ಜನಪ್ರತಿನಿಧಿಗಳು ಮತ್ತು ವೇದಿಕೆ ಮೇಲೆ ಕುಳಿತಿರುವ ಅಧಿಕಾರಿಗಳು ನಮ್ಮ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಸಿದ್ದಾರೂಢ ಮಠದ ಮಹೇಶ್ವರ ಜಿ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಕಲ್ಬುರ್ಗಿ ಉತ್ತರ ವಲಯದ ಬಿ ಆರ್ ಸಿ ಶ್ರೀಮತಿ ಶಾಂತಾಬಾಯಿ ಬಿರಾದರ್ ತಾತ ಉದ್ಯಮಿ ಉಮೇಶ್ ಪಾಟೀಲ್ ರಾಜ ಅಧ್ಯಕ್ಷರು ಹಾಗೂ ಜಿಲ್ಲಾ ಕಟ್ಟಡ ಕಾರ್ಮಿಕರ ಅಧ್ಯಕ್ಷ ಪ್ರಭುದೇವಳಸಂಗಿ ಸದಾಶಿವ್ ಮಿರ್ಜಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕರ್ನಾಟಕ ಮಲ್ಲಿಕಾರ್ಜುನ್ ಉದ್ಯಮಿಗಳು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರಾದ ದೇವೇಂದ್ರ ಕಲ್ಲೂರ್ ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷೆ ಶಿವಲಿಂಗಮ್ಮ ಲೇಂಗಟಿಕರ್ ಸೇರಿದಂತೆ ಹಲವು ಗಣ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.