ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ತುಮಕೂರು ಜ. ೭ – ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕೆ ಪೂರಕವಾಗಿ ಟ್ಯಾಬ್‌ಗಳನ್ನು ವಿತರಿಸಲಾಯಿತು.
ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ರೋಟರಿ ಬೆಂಗಳೂರು ಉದ್ಯೋಗ ಕ್ಲಬ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಯಿತು.
ಈ ವೇಳೆ ಮಾತನಾಡಿದ ಉದ್ಯೋಗದ ಆರ್ ಜಿಡಿ ಶೇಖರ್ ಅವರು,ಕೊರೋನೋ ಸೋಂಕಿನ ಸಮಯದಲ್ಲಿ ಶಿಕ್ಷಣಕ್ಕೆ ತೊಂದರೆಯಾಗದಂತೆ ಓದು ಮುಂದುವರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣ, ರೋಟರಿ ಬೆಂಗಳೂರು ಉದ್ಯೋಗ್ ಕ್ಲಬ್ ಕಾರ್ಯದರ್ಶಿ ಜೈ ಶಂಕರ್, ಸದಸ್ಯರುಗಳಾದ ರೋಟರಿಯನ್ ಗಳಾದ ಪಂಚನಾಥನ್, ಚಂದ್ರಶೇಖರ್, ಬಸವರಾಜ್ ಕಪ್ಲಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಉಪಸ್ಥಿತಿತರಿದ್ದರು.
ಹಳೆಯ ವಿದ್ಯಾರ್ಥಿ ಸಂಘದ ಇಂದ್ರಣ್ಣ, ದಯಾನಂದ್, ಜನಾರ್ದನಾಚಾರ್ಯ, ಮಂಜುಳಾ, ಮಾಲಿನಿ,ರಘು, ಭೈರೋಜಿ ರಾವ್, ಮಂಜುನಾಥ್, ಶಾಂತಕುಮಾರ್, ಅಂಬಿಕಾ, ಮಹೇಶ್ ಮತ್ತು ದೇವರಾಜ್ ಕೆ ಮತ್ತಿತರಿದ್ದರು.