ಸರ್ಕಾರಿ ಶಾಲಾ ಮಕ್ಕಳಿಗೆ ೧೦,೦೦೦ ಹ್ಯಾಪಿನೆಸ್ ಕಿಟ್‌ಗೆ ನೆಟ್‌ಆಪ್ ಕೊಡುಗೆ

ಬೆಂಗಳೂರು,ಏ೭:ಕೋವಿಡ್-೧೯ ಸಾಂಕ್ರಾಮಿಕವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಉಂಟು ಮಾಡಿದೆ. ಅಲ್ಲದೆ, ಸಮಾಜದ ಸೌಲಭ್ಯವಂಚಿತ ವರ್ಗಗಳಲ್ಲಿ ಹಸಿವು ನಿವಾರಣೆಗೆ ಪ್ರಮುಖ ವ್ಯವಸ್ಥೆ ಕೈಗೊಂಡಿದೆ.
ಈ ಸಾಂಕ್ರಾಮಿಕವು ದೇಶದ ಸಂಪೂರ್ಣ ಆರ್ಥಿಕ ರಚನೆಗೆ ಪ್ರಮುಖ ಅಡ್ಡಿ ಉಂಟು ಮಾಡುತ್ತಿದೆ. ಜೊತೆಯಲ್ಲಿಯೇ ಆಹಾರ ಪೂರೈಕಾ ಸರಣಿಯಲ್ಲಿಯೂ ಕೂಡ ಇದು ಹಾವಳಿಯನ್ನು ಸೃಷ್ಟಿಸಿದೆ. ಇದರಿಂದ ರಾಷ್ಟ್ರವ್ಯಾಪಿಯಾಗಿ ತೀವ್ರ ರೀತಿಯಲ್ಲಿ ಆಹಾರ ಭದ್ರತೆ ಇಲ್ಲವಾಗುವುದಕ್ಕೆ ದಾರಿಯಾಗುತ್ತಿದೆ. ಜಾಗತಿಕ ಕ್ಲೌಡ್ ನೇತೃತ್ವದ ದತ್ತಾಂಶ ಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿಯಾದ ನೆಟ್‌ಆ?ಯಪ್ ಈಗ ಅಕ್ಷಯಪಾತ್ರಾ ಫೌಂಡೇಷನ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿನ ಸೌಲಭ್ಯವಂಚಿತ ದುರ್ಬಲ ವರ್ಗದ ಸರ್ಕಾರಿ ಶಾಲಾ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ೧೦,೦೦೦ ಹ್ಯಾಪಿನೆಸ್ ಕಿಟ್‌ಗಳ ವಿತರಣೆ ಕೈಗೊಳ್ಳಲು ಮುಂದಾಗಿದೆ. ನೆಟ್‌ಆಪ್ ಮತ್ತು ಅಕ್ಷಯಪಾತ್ರಾ ನಡುವಿನ ಪಾಲುದಾರಿಕೆ ೭ ವರ್ಷಗಳಿಂದ ನಡೆಯುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಶಾಲೆಗಳು ಮುಚ್ಚುವ ಮುನ್ನ ಬೆಂಗಳೂರಿನಲ್ಲಿನ ಸರ್ಕಾರಿ ಶಾಲೆಗಳ ೫೦೦೦ ಮಕ್ಕಳಿಗೆ ನೆಟ್‌ಆಯಪ್ ಮಧ್ಯಾಹ್ನದ ಭೋಜನದ ಪ್ರಾಯೋಜಕತ್ವ ವಹಿಸಿತ್ತು.
ಈ ಉಪಕ್ರಮ ಕುರಿತು ನೆಟ್‌ಆಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರವಿ ಚಾಬ್ರಿಯಾ ಅವರು ಮಾತನಾಡಿ,ಕಳೆದ ಏಳು ವರ್ಷಗಳಲ್ಲಿ ಅಕ್ಷಯಪಾತ್ರಾ ಫೌಂಡೇಷನ್ ಜೊತೆಗೆ ನಾವು ಹಲವಾರು ಸಹಯೋಗಗಳನ್ನು ಕೈಗೊಂಡಿದ್ದೇವೆ. ಇವುಗಳಲ್ಲಿ ಸಹಾಯಾರ್ಥ ಅಡುಗೆ ಸ್ಪರ್ಧೆ ಅಥವಾ ಆಹಾರ ವಿತರಣೆ ವಾಹನಗಳು ಮತ್ತು ಅಡುಗೆಯ ಉಪಕರಣಗಳನ್ನು ದಾನವಾಗಿ ನೀಡುವುದು ಸೇರಿವೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಸಮಯವನ್ನು ಅದಕ್ಕಾಗಿ ಸ್ವಯಂಪ್ರೇರಣೆಯಿಂದ ಮೀಸಲಿಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಭವಿಷ್ಯದಲ್ಲಿ ಕೂಡ ಅವರೊಂದಿಗೆ ಸಹಯೋಗ ಹೊಂದುವುದನ್ನು ನಾವು ಎದುರು ನೋಡುತ್ತೇವೆ. ಎಳೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡುವ ಪ್ರಯಾಣವನ್ನು ಮುಂದುವರೆಸಲು ಇಚ್ಛಿಸುತ್ತೇವೆ ಎಂದರು.