
ಸಂಜೆವಾಣಿ ವಾರ್ತೆ
ಹಿರಿಯೂರು: ನ 4 – ತಾಲೂಕಿನ ಕೆರೆ ಕೋಡಿಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಇನ್ನರ್ವೀಲ್ ಕ್ಲಬ್ ವತಿಯಿಂದ ಅಗತ್ಯವಾಗಿ ಬೇಕಾದ ಸಮವಸ್ತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇನ್ನರ್ವೀಲ್ ಅಧ್ಯಕ್ಷರಾದ ಲಕ್ಷ್ಮಿ ರಾಜೇಶ್ ರವರು ಸರ್ಕಾರಿ ಶಾಲಾ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ದೃಷ್ಟಿಯಿಂದ ಅವರಿಗೆ ಪ್ರೋತ್ಸಾಹಿಸುವ ಸಲುವಾಗಿ ನಮ್ಮ ಕ್ಲಬ್ ವತಿಯಿಂದ ಸಮವಸ್ತ್ರಗಳನ್ನು ನೀಡುತ್ತಿದ್ದೇವೆ ಅವರಿಗೆ ಸದುಪಯೋಗವಾಗಲಿ ಎಂದು ಹೇಳಿವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಇನ್ನರ್ವೀಲ್ ಕ್ಲಬ್ ನ ರಮ್ಯಾ ರಾಜೇಶ್, ಸ್ವರ್ಣ ರೆಡ್ಡಿ, ಸೌಮ್ಯ ಪ್ರಶಾಂತ್, ಲತಾ, ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ನಾಗೇಂದ್ರಪ್ಪ ಶಿವಕುಮಾರ್ ಉಪಸ್ಥಿತರಿದ್ದರು.