ಸರ್ಕಾರಿ ಶಾಲಾ ಮಕ್ಕಳಿಗೆ ನವಲಕಲ್ಲು ಶ್ರೀಗಳಿಂದ ಪೆನ್ ಪುಸ್ತಕ ವಿತರಣೆ

ಸಿರವಾರ,ಜೂ.೨೭-
ತಾಲೂಕಿನ ನವಲಕಲ್ಲು ಬೃಹನ್ಮಠದ ಪೀಠಾಧಿಪತಿ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯರ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭಿನವಶ್ರೀ ಭಕ್ತಬಳಗದ ವತಿಯಿಂದ ನೂರಾರು ವಿದ್ಯಾರ್ಥಿಗಳಿಗೆ ಪೆನ್, ನೋಟ್ ಪುಸ್ತಕ ವಿತರಿಸಲಾಯಿತು.
ರಾಯಚೂರಿನ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಹಬ್ಬದ ಹೆಸರಿನಲ್ಲಿ ನವಲಕಲ್ಲು ಸ್ವಾಮೀಜಿ ಮತ್ತು ಅವರ ಭಕ್ತವೃಂದ ಈ ರೀತಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಡಿದ್ದು ನಿಜಕ್ಕೂ ಸ್ಪೂರ್ತಿದಾಯಕ ಕೆಲಸ ಎಂದು ಹೇಳಿದರು.
ತಾಲೂಕಿನ ರಾಜಕಾರಣಿಗಳು, ಅಧಿಕಾರಿಗಳು, ಸೇರಿದಂತೆ ಸಾವಿರಾರು ಭಕ್ತರು ಬೆಳಿಗ್ಗೆ ಯಿಂದಲೇ ಶ್ರೀ ಮಠದಲ್ಲಿ ಸೇರಿ ಶ್ರೀಗಳ ದರ್ಶನ ಪಡೆದು ಶುಭಾಶಯಗಳನ್ನು ತಿಳಿಸಿ, ಸಿಹಿ ಹಂಚಿ ಆಶೀರ್ವಾದ ಪಡೆದರು.