ಸರ್ಕಾರಿ ಶಾಲಾ ಕಟ್ಟಡ ಲೋಕಾರ್ಪಣೆ

ಕೆ.ಆರ್. ಪುರ,ಮಾ.೨೫- ದಾನಿಗಳ ನೆರವು ಹಾಗೂ ಸರ್ಕಾರದ ಅನುದಾನದಲ್ಲಿ ಜುನ್ನಸಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಶಾಲೆ ಕಟ್ಟಡವನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹದೇವಪುರ ಕ್ಷೇತ್ರದ ಜುನ್ನಸಂದ್ರ
ಭಾಗದಲ್ಲಿ ಸಾರ್ವಜನಿಕರ ಅವಶ್ಯ ಬೇಡಿಕೆಯಾದ ಸರಕಾರಿ ಶಾಲೆಯನ್ನು ನಿರ್ಮಿಸಲು ಹಲವಾರು ತೊಡಕುಗಳು ಉಂಟಾಗಿದವು ಅವುಗಳನ್ನು ಬಗೆಹರಿಸುವ ಮೂಲಕ ಸರಕಾರ ಹಾಗೂ ದಾನಿಗಳ ಸಹಾಯದಿಂದ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಾಲೆಯು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಕ್ಕಳು ನಾಡಿನ ಭವಿಷ್ಯವಾಗಿದ್ದು, ಅವರಿಗೆ ಉತ್ತಮ ಶಿಕ್ಷಣವನ್ನು ಒದಗಿಸುವುದು ನಮ್ಮ ಗುರುತರ ಜವಾಬ್ದಾರಿ ಆಗಿದೆ, ಮುಂದೆಯೂ ಈ ಭಾಗದ ಜನರ ಬೇಡಿಕೆಯನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಮುಂದಿನ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಾವು ಕ್ಷೇತ್ರದಲ್ಲಿ ಮಾಡಿರುವ ಭರಪೂರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜನರ ಮುಂದಿಟ್ಟು ಚುನಾವಣೆಯನ್ನು ಎದುರಿಸಲಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಇಓ ರಾಮಮೂರ್ತಿ, ಕ್ಷೇತ್ರದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ,ದಾನಿಗಳಾದ ಚೇತನ್, ಚಂದ್ರಶೇಖರ್, ಸೋಮಶೇಖರ್,ಮಹದೇವ, ಯುಗಂಧರ್, ಇನ್ ಪ್ರಾ ಸಂಸ್ಥೆ ಸಿಬ್ಬಂದಿ ಮತ್ತು ಉಪಸ್ಥಿತರಿದ್ದರು.