ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಡಿ ಎಚ್ ಓ  ಗೆ ಗೌರವ  

ಸಂಜೆವಾಣಿ ವಾರ್ತೆ

ಹರಿಹರ ಆ 30 ;  ನೂತನ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳದ ಡಾ.ಎಸ್ . ಷಣ್ಮುಕ್ಕಪ್ಪರನ್ನು ಕರ್ನಾಟಕ ರಾಜ್ಯ ಸರ್ಕಾರಿ ವ್ಯೆದ್ಯಾಧಿಕಾರಿಗಳ ಸಂಘ  ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವ್ಯೆದ್ಯಾಧಿಕಾರಿಗಳ ಸಂಘದ ಅಧ್ಯಕರಾದ ಡಾ. ಎಸ್ ಮಹೇಶ್ ಮಾತನಾಡಿ  ಷಣ್ಮುಖಪ್ಪ ಇವರು ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಉತ್ತಮ ಸೇವೆಸಲ್ಲಿಸಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಸೇವೆಯನ್ನು ಸಲ್ಲಿಸಿ ಅವರ ಸೇವಾ ನಿಷ್ಠೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹುದ್ದೆ ಒಲಿದು ಬಂದಿದೆ. ಅವರ ಅವಧಿಯಲ್ಲಿ ಜಿಲ್ಲೆ ಮತ್ತು ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವಂತ  ನೂನತೆಗಳನ್ನು ಸರಿಪಡಿಸಿ ನಾಗರೀಕರಿಗೂ ವೈದ್ಯ ಅಧಿಕಾರಿಗಳಿಗೂ ಅನುಕೂಲವಾಗವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಂಘದ ವೈದ್ಯಾಧಿಕಾರಿಗಳ ಪರವಾಗಿ  ಮನವಿಯನ್ನು ಮಾಡುತ್ತೇನೆ   ಜಿಲ್ಲಾ ಆರೋಗ್ಯ ಅಧಿಕಾರಿಗಳು ಸುಧಾರಣೆ ತರುವ ವಿಶ್ವಾಸ ನಮ್ಮಲ್ಲ ವೈದ್ಯರುಗಳಿಗಿದೆ ಎಂದು ಹೇಳಿದರುಕಾರ್ಯದರ್ಶಿ ಎಂ ಎಸ್ ಡಾ.  ರಾಘವೇಂದ್ರ ಖಜಾಂಚಿ.ಡಾ. ನಾಗರಾಜ್. ಜೆ. ಎಸ್  ಪದದಕರಿಗಳಾದ, ಡಾ. ರಾಘವೇಂದ್ರ. ಬಿ. ಸಿ, ಡಾ. ಬಸವಂತ್. ಜಿ. ಎಂ, ಡಾ ನಟರಾಜ್. ಎಚ್. ಜೆ, ಡಾ, ಶಿಲ್ಪಾ ನಾಯಕ್,ಡಾ. ವಿಶಾಲ್. ಜೆ  ಕರ್ನಾಟಕ ರಾಜ್ಯ ಸರ್ಕಾರಿ ವ್ಯೆದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳುಉಪಸ್ಥಿತರಿದ್ದರು.