ಸರ್ಕಾರಿ ವಸತಿ ಮೇಲ್ವಿಚಾರಕನ ವಿರುದ್ಧ ಕ್ರಮಕ್ಕೆ ವಿಧ್ಯಾರ್ಥಿಗಳ ಆಗ್ರಹ

ಮಾನ್ವಿ.೧೩- ಪಟ್ಟಣದ ಅಂಬೇಡ್ಕರ್ ಬಾಲಕರ ವಸತಿ ನಿಲಯ-೨ ಮೇಲ್ವಿಚಾರಕ ಚಂದ್ರಶೇಖರ ಹೂಗಾರ ವಿದ್ಯಾರ್ಥಿಗಳ ಮೇಲೆ ಮಾನಸಿಕ ಹಲ್ಲೆ ಮತ್ತು ಗುಂಡಾ ವರ್ತನೆ ಮಾಡುತ್ತಾ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ ಜೀವ ಬೆದರಿಕೆ ಹಾಕುತ್ತಾರೆ ಇದರಿಂದ ಇವರ ವಿರುದ್ಧ ಸೂಕ್ತ ಕ್ರಮ ಹಾಗೂ ಕೂಡಲೇ ಅಮಾನತು ಮಾಡುವಂತೆ ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ವಸತಿ ನಿಲಯದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು..
ಬಹಳ ಮುಖ್ಯವಾಗಿ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ ನಮಗೆ ಬೇಕಾಗಿರುವ ಸೌಲಭ್ಯಗಳನ್ನು ಕೇಳಿದರೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ ಅಲ್ಲದೆ ನಾನು ಹೇಳಿದಂತೆ ಕೇಳಬೇಕು ಎನ್ನುವ ಎನ್ನುತ್ತಾರೆ ಕೂಡಲೇ ಇವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಮಕ್ಳಳನ್ನು ರಕ್ಷಣೆ ಮಾಡುವಂತೆ ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್ ಉದ್ಬಾಳ, ವಿದ್ಯಾರ್ಥಿಗಳಾದ ಅಭಿ ಗೊನ್ವಾರ, ರಾಜು, ವಿಜಯ ಕಡದಿನ್ನಿ,ಚನ್ನು,ಪ್ರಶಾಂತ ಸೇರಿದಂತೆ ನೂತನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.