ಸರ್ಕಾರಿ ರಸ್ತೆ ಅತಿಕ್ರಮಣ ಅಂಗಡಿಗಳು ಸಂಚಾರಕ್ಕೆ ತೊಂದರೆ

ಸಂಜೆವಾಣಿ ಪ್ರತಿನಿಧಿಯಿಂದ
ಸಿಂಧನೂರು. ಜುಲೈ ೨೫ ನಗರದ ಸರ್ಕಾರಿ ರಸ್ತೆಯ ಎರಡು ಬದಿಗಳಲ್ಲಿ ಅನಧಿಕೃತ ಅಂಗಡಿಗಳು ಹಾಕಿಕೊಂಡು ವ್ಯಾಪಾರ ವೈವಾಟ ಮಾಡುವದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ ಇದರ ಬಗ್ಗೆ ಶಾಸಕರು ನಗರ ಸಭೆಯ ಪೌರಾಯುಕ್ತರು ಗಮನ ಹರಿಸಿ ಸರ್ಕಾರಿ ರಸ್ತೆ ಅತಿಕ್ರಮಣ ಮಾಡಿಕೊಂಡ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ನಗರದ ರಾಷ್ಟ್ರೀಯ ಹೆದ್ದಾರಿಯಾದ ಗಂಗಾವತಿ. ರಾಯಚೂರು, ಕುಷ್ಟಗಿ, ಮಸ್ಕಿ,ಬೆಂಗಳೂರು ರಸ್ತೆಯ ಎರಡು ಬದಿಗಳಲ್ಲಿ ಕೆಲವರು ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡಿದರೆ ಇನ್ನೂ ಕೆಲವರು ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ ಅಂಗಡಿಗಳನ್ನು ಹಾಕಿಕೊಂಡ ಕಾರಣ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಕೆಲವೊಂದು ಸಲ ಅಪಘಾತ ಗಳು ಸಂಭವಿಸಿವೆ.
ನಗರ ಸಭೆಯಿಂದ ಗಂಗಾವತಿ ರಸ್ತೆ , ಕುಷ್ಟಗಿ ರಸ್ತೆ ಮಸ್ಕಿ ರಸ್ತೆ ಎರಡು ಕಡೆ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕೆಲವರು ಅನಧಿಕೃತವಾಗಿ ಅಂಗಡಿ, ಡಬ್ಬಿ, ಶೇಡ್‌ಗಳನ್ನು ಹಾಕಿಕೊಂಡು ವ್ಯಾಪಾರ ಮಾಡಿದರೆ ಇನ್ನು ಕೆಲವರು ರಸ್ತೆಯಲ್ಲಿ ಅನಧಿಕೃತ ಅಂಗಡಿಗಳನ್ನು ಇಟ್ಟುಕೊಂಡು ಬೇರೆಯವರಿಗೆ ಅನಧಿಕೃತವಾಗಿ ಬಾಡಿಗೆ ನೀಡಿ ಹಣ ವಸೂಲಿ ಮಾಡುತ್ತಿದ್ದು ಅಂಗಡಿಗಳ ತೆರವು ಮಾಡಿ ಸಾರ್ವಜನಿಕರ ಹಾಗೂ ವಾಹನ ಸಂಚಾರ ಕ್ಕೆ ಅನುಕೂಲ ಮಾಡಿಕೊಡುವಂತೆ ನಗರ ಸಭೆಗೆ ಮನವಿ ಮಾಡಿಕೊಂಡರು ಸಹ ಯಾವದೆ ಪ್ರಯೋಜನ ವಾಗಿಲ್ಲ ಎನ್ನುವದು ಸಾರ್ವಜನಿಕರ ಅರೋಪವಾಗಿದೆ.
ಸಾರ್ವಜನಿಕರು ತಿರುಗಾಡುವ ಸರ್ಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕಾನೂನುಬಾಹಿರವಾಗಿ ಅಂಗಡಿಗಳನ್ನು ಇಟ್ಟುಕೊಂಡಿರುವ ಮೇಲೆ ಶಾಸಕ ಹಂಪನಗೌಡ ಬಾದರ್ಲಿ,ಹಾಗೂ ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಕಣ್ಣು ತೆರೆದು ನೋಡಿ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.ಈಗಾಗಲೆ ಶಾಸಕರ ಸೂಚನೆ ಮೇರೆಗೆ ನಗರ ಸಭೆಯ ಪೌರಾಯುಕ್ತರು ತಮ್ಮ ಸಿಬ್ಬಂದಿಗಳ ಜೋತೆ ರಸ್ತೆಯಲ್ಲಿ ವ್ಯಾಪಾರ ಮಾಡುವ ತಳ್ಳು ಬಂಡಿಗಳನ್ನು ತೆರವುಗೊಳಿಸಿದ್ದಾರೆ ಅದರಂತೆ ರಸ್ತೆಯ ಅತಿಕ್ರಮಣ ಮಾಡಿಕೊಂಡ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಶಾಸಕ ಹಂಪನಗೌಡ ಬಾದರ್ಲಿಯವರನ್ನು ಒತ್ತಾಯ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಸರ್ಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡ ಬಗ್ಗೆ ನಗರ ಸಭೆಯ ಗಮನಕ್ಕೆ ಇದ್ದರು ಸಹ ಯಾಕೆ ತೆರವುಗೊಳಿಸಿಲ್ಲ ಆದರೆ ಪ್ರತಿದಿನ ರಸ್ತೆಯ ಮೇಲೆ ವ್ಯಾಪಾರ ಮಾಡುವ ತಳ್ಳು ಬಂಡಿಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ ಅಂದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೂಂದು ಕಣ್ಣಿಗೆ ಸುಣ್ಣ ಎನ್ನುವ ದೊರಣೆಯನ್ನು ಅಧಿಕಾರಿಗಳು ಮಾಡುವದನ್ನು ಬೀಡಬೇಕು ಸರ್ಕಾರಿ ರಸ್ತೆಯ ಅತಿಕ್ರಮಣ ಮಾಡಿಕೊಂಡವರಿಗೆ ನಗರ ಸಭೆಯ ಅಧಿಕಾರಿಗಳು ಹೆದರಿದ್ದಾರೋ ಇಲ್ಲ ಅತಿಕ್ರಮಣ ಮಾಡಿಕೊಂಡವರೆ ಅಧಿಕಾರಿಗಳನ್ನು ಹೆಸರಿಸಿದ್ದಾರೋ ತಿಳಿಯದಾಗಿದೆ ಇಲ್ಲ ಇವರ ಮದ್ಯ ಏನಾದರು ವ್ಯಾವಹಾರಿಕ ನೆಡೆದಿದೋ ಎನ್ನುವ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ ಆದರೆ ಪ್ರಮಾಣಿಕ ದಕ್ಷ ಅಧಿಕಾರಿ ಮಂಜುನಾಥ ಗುಂಡುರ ಇದಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಳ್ಳು ಬಂಡಿಗಳನ್ನು ತೆರವುಮಾಡಿದಂತೆ ರಸ್ತೆಯ ಅತಿಕ್ರಮಣ ಅಂಗಡಿ ಗಳನ್ನು ತೆರವುಗೊಳಿಸಿದರೆ ರಸ್ತೆಯ ಎರಡು ಕಡೆ ರಸ್ತೆಯು ಅಗಲವಾಗಿ ಸಾರ್ವಜನಿಕರ ಹಾಗೂ ವಾಹನ ಸಂಚಾರ ಕ್ಕೆ ಅನುಕೂಲ ವಾಗುವ ಜೊತೆಗೆ ನೊಡುಗರಿಗೆ ನಗರ ಸುಂದರವಾಗಿ ಕಾಣುತ್ತದೆ ಯಾವದೆ ಮುಲಾಜಿಗೆ ಒಳಗಾಗದೆ ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಮಾಡುತ್ತಾರೆ ಎನ್ನುವ ವಿಶ್ವಾಸವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.