ಸರ್ಕಾರಿ ಯೋಜನೆಗಳ ಸೌಲಭ್ಯ ನೀಡುವಂತೆ ಶಾಸಕರ ಮುಂದೆ ಗ್ರಾಮಸ್ಥರು ಅಳಲು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.31: ನಗರದ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಕೆಂಚನಗುಡ್ಡ, ಕೆ.ತಾಂಡ, ದೇವಾಲಪುರ ಗ್ರಾಮದ ಗ್ರಾಮಸ್ಥರು ಶಾಸಕರನ್ನು ಭೇಟಿ ನೀಡಿ ತಮ್ಮ ಸಮಸ್ಯೆಗಳಾದ ವೃದ್ದಪ ವೇತನ, ವಿಧವೇ ವೇತನ, ಅಂಗವಿಕಲರ ವೇತನ ಸೇರಿದಂತೆ ಇತರೆ ಸೌಲಭ್ಯಗಳಿಗೆ ಹಾಕಿದ ಅರ್ಜಿಯನ್ನು ಸ್ಥಳೀಯ ಗ್ರಾಮ ಲೇಕ್ಕಾಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ, ನಮಗೆ ನ್ಯಾಯವನ್ನು ದೋರಕಿಸಿಕೊಡಿ ಎಂದು ಅಳಲು ತೋಡಿಕೊಂಡರು.
ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ ಎರಡು ಬಾರಿ ತೆಕ್ಕಲಕೋಟೆ ವಲಯದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹಾರಿಸಿಕೊಳ್ಳಲು ಕಾರ್ಯಕ್ರಮ ನಡೆಸಿದ್ದು, ನಿಮ್ಮ ಭಾಗದ ಜನಪ್ರತಿಗಳಿಗೆ ನಿಮ್ಮ ಸಮಸ್ಯೆಗಳನು ಗಮನಕ್ಕೆ ತಂದು ಅವರು ನಮಗೆ ತಿಳಿಸುವಂತೆ ಹೇಳಿದರೆ ಬೇಗನೆ ಪರಿಹಾರ ದೊರೆಯುತ್ತಿತ್ತು, ಆ ಭಾಗದ ಗ್ರಾಮ ಕಂದಾಯ ಅಧಿಕಾರಿ ಮತ್ತು ಲೆಕ್ಕಾಧಿಕಾರಿಗಳನ್ನು ಕರೆದು ಅವರು ಹಾಕಿದ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಇತ್ಯಾರ್ಥಿಗೊಳಿಸಬೇಕೆಂದು ತಿಳಿಸಿದರು.
ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ, ತೆಕ್ಕಲಕೋಟೆ ಕಂದಾಯ ಅಧಿಕಾರಿ ವೀರೇಂದ್ರಕುಮಾರ ಇದ್ದರು.