ಸರ್ಕಾರಿ ಯೋಜನೆಗಳ ‘ಕ್ಯಾಲೆಂಡರ್ ಬಿಡುಗಡೆ

ಪುತ್ತೂರು, ಜ.೧೨- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಮತ್ತು ಯೋಜನೆ ತಲುಪಬೇಕೆಂದು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ನೆನಪಿಸುವ ೨೦೨೧ನೇ ಕ್ಯಾಲೆಂಡರ್‌ನ್ನು ಶಾಸಕರ ಕಚೇರಿಯಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಶಾಸಕ ಸಂಜೀವ ಮಠಂದೂರು ಕ್ಯಾಲೆಂಡರ್ ಬಿಡುಗಡೆಗೊಳಿಸಿ,  ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದಿಂದ ಏನೇನು ಸವಲತ್ತು ಯೋಜನೆಗಳನ್ನು ಕೊಡಬೇಕೋ ಆ ಎಲ್ಲಾ ಯೋಜನೆಗಳು ಸಾಮಾನ್ಯರಿಗೆ ತಲುಪಬೇಕು ಮತ್ತು ಅದರ ಮಾಹಿತಿ ಕೂಡಾ ಇರಬೇಕೆಂಬ ನಿಟ್ಟಿನಲ್ಲಿ ಶಾಸಕರ ಕಚೇರಿಯಿಂದ ಬಿಡುಗಡೆ ಮಾಡಿದ ಕ್ಯಾಲೆಂಡರ್ ಪ್ರತಿ ಪುಟದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ನೆನಪಿಸಲಾಗಿದೆ. ಇದನ್ನು ಆಗಾಗ ನೆನಪು ಮಾಡುತ್ತಾ ಕಾರ್ಯಗತಗೊಳಿಸುವ ಕೆಲಸ ಆಗಬೇಕೆಂದರು.

ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ಜಯರಾಮ ಪೂಜಾರಿ, ವಿಶ್ವನಾಥ ಕುಲಾಲ್, ಯತೀಂದ್ರ ಕೊಚ್ಚಿ, ಸತೀಶ್ ಪಾಂಬಾರು, ಜೀವನ್ ಉಪಸ್ಥಿತರಿದ್ದರು.