ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕರೆ


ಸಂಜೆವಾಣಿ ವಾರ್ತೆ
ಕುರುಗೋಡು.ಜ.18- ಸರ್ಕಾರ ಬಡಜನರಿಗಾಗಿ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದೆ. ಇಂಥಹ ಜನಪರ ಯೋಜನೆಗಳನ್ನು ಪ್ರತಿ ಇಲಾಖೆ ಅಧಿಕಾರಿಗಳು ಜನರಿಗೆ ತಲುಪಿಸುವಲ್ಲಿ ವಿಳಂಬ ಮಾಡಬೇಡಬಾದರು, ಒಂದುವೇಳೆ ತಪ್ಪಿದ್ದಲ್ಲಿ ಅವರ ವಿರುದ್ದ ಸೂಕ್ತಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಲೋಕಾಯುಕ್ತ ಇನ್ಸೆಪೆಕ್ಟರ್ ಸಿಪಿಐ. ಸಂಗಮೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ಕುರುಗೋಡು ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಾರ್ವಜನಿಕರ ಕುಂದು-ಕೊರತೆಗಳ ಅರ್ಜಿಸಲ್ಲಿಕೆ  ಹಾಗು ಅಹವಾಲು ಸ್ವೀಕಾರ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ರೀಯ ಭದ್ರತಾಯೋಜನೆಅಡಿಯಲ್ಲಿ ಅರ್ಹ ಫಲಾಭವಿಗಳಿಗೆ ಮಾಶಾಸನ, ಪಿಂಚಣಿ, ವಿಧವಾವೇತನ, ಸೇರಿದಂತೆ ಇತರೆ ಯೋಜನೆಗಳಿಗೆ ಅರ್ಹ ಫಲಾಭವಿಗಳು ಸಂಬಂದಿಸಿದ ಕಛೇರಿಗೆ ಬಂದಾಗ, ಅವರನ್ನು ಅಲೆದಾಡಿಸದೇ, ಅವರ ಕೆಲಸಗಳನ್ನು ಸುಗಮವಾಗಿ ಕಾರ್ಯನಿರ್ವಹಿಸಿ ಅವರಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಸಭೆಯ ಮದ್ಯದಲ್ಲಿ ಕುರುಗೋಡು ಪಟ್ಟಣದ ಹರಿಜನಕಾಲೋನಿಯ ನಿವಾಸಿ ಎಂ.ರುದ್ರಪ್ಪನವರು ತಮ್ಮ ಅರ್ಜಿಯನ್ನು ಲೋಕಾಯುಕ್ತ ಇನ್ಸೆಪೆಕ್ಟರ್ ಸಂಗಮೇಶ ರವರಿಗೆ ಸಲ್ಲಿಸಿ ಮಾತನಾಡಿ, ಸಾರ್, ನನ್ನ ಸರ್ವೆನಂಬರ್ 676/6 ರ ಪೈಕಿ 7,42ಸೆಂಟ್ಸ್ ಜಮೀನಿನ ಪಟ್ಟಾಕಾಪಿ ನೀಡುವುದನ್ನು ತೀರಾವಿಳಂಬಮಾಡುತ್ತಿದ್ದಾರೆ,  ಒಬ್ಬ ಬಡರೈತನಾದ ನಾನು  ಭೂದಾಖಲೆಗನ್ನು ಪಡೆಯುವುದಕ್ಕಾಗಿ ಹಲವಾರು ವರ್ಷಗಳಿಂದ ಕಛೇರಿಗೆ ಅಲೆದಾಡಿದರೂ ಇಂದಿಗೂ ನನ್ನ ದಾಖಲೆಗಳನ್ನು ಕೊಟ್ಟಿಲ್ಲ ಎಂದು ತನ್ನ ನೋವನ್ನು ತೋಡಿಕೊಂಡರು. ಇದಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಇನ್ಸೆಪೆಕ್ಟರ್ ಸಂಗಮೇಶರವರು ನಾನೇ ಬಳ್ಳಾರಿಯ ತಾಲೂಕುಕಛೇರಿಗೆ ತೆರಳಿ ನಿಮ್ಮ ಭೂದಾಖಲೆಪತ್ರಗಳನ್ನು ತಂದುಕೊಡುವುದಾಗಿ ಭರವಸೆ ನೀಡಿದರು.  ಸಭೆಯಲ್ಲಿ ಪ್ರಗತಿಪರ ರೈತ ಎಸ್.ನಾಗರಾಜ, ಕ್ಯಾದಿಗೆಹಾಳುರಾಘವೇಂದ್ರ, ಪುರಸಭೆಯ ಸದಸ್ಯರು ಸೇರಿದಂತೆ ಇತರರು ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಕಂದಾಯ, ತಾಲೂಕುಪಂಚಾಯಿತಿ, ಮತ್ತು ಪುರಸಭೆ ಸಂಬಂದಪಟ್ಟಂತೆ ಒಟ್ಟು 3 ಅರ್ಜಿಸಲ್ಲಿಕೆಯಾಗಿದ್ದು, ಇವುಗಳ ಬಗ್ಗೆ ಮುಂದಿನ ಸಭೆಯೊಳಗಾಗಿ ಅವರಿಗೆ ಕೆಲಸಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಉಪ-ತಹಶೀಲ್ದರ್ ಶಿವರತ್ನಮ್ಮ, ಯಾಕೂಬ್‍ಅಲಿ, ವಿಜಯಕುಮಾರ್, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷಿ ಸೇರಿದಂತೆ ಕುರುಗೋಡು ತಾಲೂಕು ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳು ಬಾಗವಹಿಸಿದ್ದರು.