ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪರಿಸರ ಜಾಗೃತಿ 

ದಾವಣಗೆರೆ.ಜೂ.೨೦; ನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ನೆಹರು ಯುವ ಕೇಂದ್ರ, ದಾವಣಗೆರೆ ಐಕ್ಯೂಎಸಿ, ರಾಷ್ಟಿçÃಯ ಸೇವಾ ಯೋಜನೆ ಘಟಕ ಮತ್ತು ಹೊಯ್ಸಳ ಕ್ರೀಡಾ – ಸಾಂಸ್ಕೃತಿಕ ಯುವಕ ಸಂಘದ ಸಂಯುಕ್ತಾಶ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಹೃದಯಭಾಗ ಕುಂದವಾಡ ಕೆರೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಪರಿಸರದೊಂದಿಗೆ ಜೀವನಶೈಲಿ, ಸ್ವಚ್ಛತಾ ಶ್ರಮದನವನ್ನು ವಿದ್ಯಾರ್ಥಿನಿಯರು ಕೆರೆಯ ಸುತ್ತಮುತ್ತ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ನೀರಿನ ಬಾಟಲ್‌ಗಳಿಂದ ತುಂಬಿದ್ದ ವಸ್ತುಗಳನ್ನು ತೆರವುಗೊಳಿಸಿ ಸ್ಚಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಶೈಲಜಾ, ಐಕ್ಯೂಎಸಿ ಸಂಚಾಲಕ ಪ್ರೊ.ಭೀಮಣ್ಣ, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ. ಮಹಮದ್ ಅಲಿ, ಶ್ರೀಮತಿ ಸುನೀತಾ, ವರದ ರಾಘವೇಂದ್ರ, ರಮೇಶ್.ಜಿ. ಧನಂಜಯ, ಪರಿಸರ ವಿಭಾಗದ ಉಪನ್ಯಾಸಕರಾದ ಯೋಗೇಶ್ವರ ಜಿ.ಎಂ., ವಿದ್ಯಾರ್ಥಿನಿಯರು ಭಾಗವಹಿಸಿದ್ದರು.