ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ:ಮಾ.12: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2024 ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಅಂತರಾಷ್ಟ್ರೀಯ ದಿನಾಚರಣೆ-2024 ಅನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಕಲಬುರ್ಗಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಪ್ರಾದೇಶಿಕ ಕಚೇರಿ, ಕಲ್ಬುರ್ಗಿ ಹಾಗೂ ಇನ್ನರ್ ವೀಲ್ ಕ್ಲಬ್ ಗುಲ್ಬರ್ಗ ವತಿಯಿಂದ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಆಯೋಜಿಸಿ ಜಿಲ್ಲೆಯಲ್ಲಿರುವ ಸಾಧನೆಗೈದ ಮಹಿಳೆಯರನ್ನು, ಸಂಸ್ಥೆಯ, ಸಹ-ಸಂಸ್ಥೆಯ ಇನ್ನಿತರ ಸಂಸ್ಥೆಯ ಮಹಿಳಾ ಸಿಬ್ಬಂದಿಯವರನ್ನು ಸನ್ಮಾನ ಮಾಡಲಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಬೆಂಗಳೂರು, ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2024 ಅಂಗವಾಗಿ ಆನ್ ಲೈನ್ ಮೂಲಕ 5ನೇ ವರ್ಷದ ಸರ್ ಸಿ. ವಿ ರಾಮನ್ ಆನ್ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಕಲ್ಬುರ್ಗಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಕು. ಪ್ರಜ್ಞ ಮಂಜುನಾಥ್ ಅರಿಕೇರಿ (9ನೇ ತರಗತಿ ಕೇಂದ್ರೀಯ ವಿದ್ಯಾಲಯ ಕಲಬುರ್ಗಿ), ದ್ವಿತೀಯ ಸ್ಥಾನ ಕು. ಶ್ರೀ ಗೌರಿ ಪಾಟೀಲ್, (10ನೇ ವರ್ಗ ಗುರುಕಲ ಪಬ್ಲಿಕ ಶಾಲೆ ಕಲ್ಬುರ್ಗಿ), ತೃತೀಯಸ್ಥಾನ ಕು. ಸಹನಾ. ಯಸ್ ಭೂಸನೂರ್ (9ನೇ ತರಗತಿ ಎಸ್.ಆರ್.ಎನ್ ಮೆಹತ ಶಾಲೆ, ಕಲ್ಬುರ್ಗಿ) ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೈಲಜಾ ತಪಲಿ, ಕಲ್ಬುರ್ಗಿ ಊಚ್ಚ ನ್ಯಾಯಾಲಯದ ವಕೀಲರು ಮತ್ತು ಗುಲ್ಬರ್ಗ ಮಹಿಳಾ ಸಹಕಾರಿ ಸೌಹಾರ್ದ ನಿಯಮಿತ ಕಲ್ಬುರ್ಗಿ ಸಂಸ್ಥಾಪಕ ಅಧ್ಯಕ್ಷರು, ದಿನಾಚರಣೆಯ ಬಗ್ಗೆ ಮಾತನಾಡಿ ಈ ದಿನದ ಮಹತ್ವ ಪ್ರಾರಂಭ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿ ಹಾಗೂ ಮಹಿಳೆಯರು ಸ್ವಾವಲಂಬಿ ಆಗಬೇಕು ಹಾಗೂ ದಿನದ ಘೋಷ ವಾಕ್ಯದ ಬಗ್ಗೆ ಕೂಡ ತಿಳಿಸಿದರು. ಈ ದಿನದ ದಿನಾಚರಣೆಯ ಘೋಷವಾಕ್ಯದೊಂದಿಗೆ ಮುಖ್ಯ ಉಪಾನ್ಯಾಸ ನೀಡಿದ ಡಾ. ಪ್ರಭುದೇವ್ ಎಂ ಎಸ್, ಉಪನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್ ಕಾಳಗಿ ಹಾಗೂ ಅಧ್ಯಕ್ಷರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಲ್ಬುರ್ಗಿ ಜಿಲ್ಲೆ, ಸಮಾನತೆ, ನ್ಯಾಯ, ಶಾಂತಿ ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುವ ದಿನಾಂಕವನ್ನು ಆಚರಿಸಲು ಮಹಿಳೆಯರು ಸೇರುತ್ತಾರೆ. ಅಂತರಾಷ್ಟ್ರೀಯ ಮಹಿಳಾ ದಿನವು ಪುರುಷರೊಂದಿಗೆ ಸಮಾನವಾಗಿ ಭಾಗವಹಿಸಲು ಬಯಸುವ ಮಹಿಳೆಯರ ಹೋರಾಟದಲ್ಲಿ ಬೇರೂರಿದೆ. ಮಹಿಳೆಯರ ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಸಾಧನೆಗೈದು ಮಾದರಿ ಆದವರ ಬಗ್ಗೆ, ಸಾಧನೆಗಳ ಬಗ್ಗೆ ಪರಿಚಯಿಸುತ್ತಾ ಭಾರತ ದೇಶದಲ್ಲಿ ಪ್ರಪ್ರಥಮ ಮಹಿಳೆಯರ ಬಗ್ಗೆ ಭಾವಚಿತ್ರದೊಂದಿಗೆ ಮಹಿಳೆಯರ ಸಾಮಥ್ರ್ಯ ಕೌಶಲ್ಯಗಳೆದ್ದರೂ ಸಮಾಜದಲ್ಲಿ ಹಿಂದುಳಿಯುತ್ತಿದ್ದಾರೆ. ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲೂ ಹೊರಗುಳಿಸುವಿಕೆ ಪ್ರಕ್ರಿಯೆ ತಲೆತಲಾಂತರದಿಂದಲೂ ನಡೆದುಕೊಂಡಿದೆ ಅದು ಒಳಗೊಳ್ಳುವಿಕೆ ಆಗಬೇಕು. ವಿವಿಧ ಹಂತಗಳಲ್ಲಿ/ಕ್ಷೇತ್ರಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವಿಕೆಗೆ ಯಾವ ರೀತಿ ನಾವು ಹಾಗೂ ಸಮಾಜ ಸ್ಪಂದಿಸಬೇಕಾಗಿದೆ ಮತ್ತು ಮಹಿಳೆಯರಲ್ಲಿರುವ ಸಾಮಥ್ರ್ಯ ಹಾಗೂ ಕೆಲವು ದೌರ್ಬಲ್ಯಗಳನ್ನು ನಿವಾರಿಸಿಕೊಂಡು ಯಾವ ರೀತಿ ಒಳಗೊಳ್ಳುವಿಕೆಗೆ ತೊಡಗಿಸಿಕೊಂಡು ಸಮಾಜದ, ದೇಶದ ಸ್ಥಿತಿ ಹಾಗೂ ಸ್ವಯಂ ಉದ್ಯೋಗಿಯಾಗಿ ಆರ್ಥಿಕತೆಯಲ್ಲಿ ಯಾವ ರೀತಿ ಕೊಡುಗೆ ನೀಡಬೇಕೆಂಬ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು. ಒಳಗೊಳ್ಳುವಿಕೆಗೆ ಪ್ರೇರೇಪಣೆ, ವೈಜ್ಞಾನಿಕ ಮನೋವೃತ್ತಿ ಬಳಸಿಕೊಂಡು ಪ್ರತಿಯೊಂದು ವಿಷಯ ಮತ್ತು ಸನ್ನಿವೇಶಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರು ಹಿಂದುಳಿಯಲು, ಸಂಶೋಧನೆಯಲ್ಲಿ ಕೆಲವೇ ಕೆಲವು ನೋಬೆಲ್ ಪ್ರಶಸ್ತಿಗಳನ್ನು ಪಡೆಯಲು ಕಾರಣಗಳು ಮತ್ತು ಖ್ಯಾತ ವಿಜ್ಞಾನಿಗಳು ಅವರ ಸಂಶೋಧನೆಗಳು, ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟರು. ಮಹಿಳೆಯರು ಮುಂದೆ ಬರಬೇಕಾದರೆ ವಿಜ್ಞಾನ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್, ಡಿಪೆÇ್ಲೀಮಾ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಸಾಕಷ್ಟು ರೀತಿಯಲ್ಲಿ ಸಂಶೋಧನೆಗೆ ಕೊಡುಗೆ ನೀಡಬಹುದಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಾಂತ್ರಿಕ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಪ್ರವೇಶಾತಿ ಕಡಿಮೆ ಆಗಿರುವುದನ್ನು ಕಳವಳ ವ್ಯಕ್ತಪಡಿಸಿದರು.
ಶ್ರೀಮತಿ. ಸಿದ್ದಮ್ಮ ಗೊಬ್ಬುರ್, ಪ್ರಾಚಾರ್ಯರು, ನೂತನ ವಿದ್ಯಾಲಯ ಪಾಲಿಟೆಕ್ನಿಕ, ಕಲ್ಬುರ್ಗಿ, ಶ್ರೀಮತಿ. ಉಷಾ ಪಾಟೀಲ್, ಪ್ರಾಚಾರ್ಯರು, ಹೆಚ್. ಕೆ. ಈ ಮಹಿಳಾ ಪಿಯು ವಿಜ್ಞಾನ ಮತ್ತು ಕಲಾ ಕಾಲೇಜು, ಕಲ್ಬುರ್ಗಿ, ಶ್ರೀಮತಿ ರಾಜೇಶ್ವರಿ ಚಟಗುಪ್ಕಾರ್, ಅಧ್ಯಕ್ಷರು ಹಾಗೂ ಶ್ರೀದೇವಿ ಕುಲಕರ್ಣಿ, ಕಾರ್ಯದರ್ಶಿ ಇನ್ನರ್ವಿಲ್ ಕ್ಲಬ್ ಗುಲ್ಬರ್ಗ ಕ್ಲಬ್ ಕಲ್ಬುರ್ಗಿ ಹಾಗೂ ಶ್ರೀಮತಿ. ಜಯಲಕ್ಷ್ಮಿ. ಕೆ ಮತ್ತು ಶ್ರೀಮತಿ. ಸುನಂದಾ ದೇವಿ ವಿಭಾಗ ಮುಖ್ಯಸ್ಥರು ಸರಕಾರಿ ಪಾಲಿಟೆಕ್ನಿಕ್ ಕಲ್ಬುರ್ಗಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ನಳಿನಿ ಮಹಾಗವ್ಕರ್, ಮಹಿಳೆಯರು ಸ್ವಾವಲಂಬಿಯಾಗಬೇಕು ಸ್ವಯಂ ಉದ್ಯೋಗಿ ಆಗಬೇಕು ಕುಟುಂಬವಲ್ಲದೆ ದೇಶದ ಆರ್ಥಿಕತೆಯಲ್ಲಿ ಕೊಡುಗೆ ನೀಡಬೇಕು ಎಂದು ಹೇಳಿದರು. ಶ್ರೀಮತಿ ಉಷಾ ಪಾಟೀಲ್ರು ಮಾತನಾಡಿ ಮಹಿಳೆಯರು ಯಾವ ರೀತಿ ಸಮಾಜಕ್ಕೆ ಕೊಡುಗೆ ನೀಡಬಹುದೆಂಬದನ್ನ ತಿಳಿಸಿದರು. ಶ್ರೀಮತಿ. ರಾಜೇಶ್ವರಿರವರು ಮಾತನಾಡಿ ಮಹಿಳೆಯರು ಯಾವ ರೀತಿ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದು ತಿಳಿಸುತ್ತಾ ಯಾವ ರೀತಿ ಶಿಕ್ಷಣ ಇತರೆ ಕೌಶಲ್ಯಗಳನ್ನು ಬೆಳೆಸಿಕೊಂಡು ಸ್ವಾವಲಂಬಿ ಆಗಬೇಕು ಉದ್ಯೋಗಸ್ತೆ ಆಗಬೇಕು ಎಂಬ ಬಗ್ಗೆ ಮಾತನಾಡಿದರು.

ಕೊನೆಯಲ್ಲಿ ಮುಖ್ಯ ಉಪನ್ಯಾಸ ನೀಡಿದ ಡಾ. ಪ್ರಭುದೇವ್ ಎಂ ಎಸ್, ಉಪನ್ಯಾಸಕರು ಹಾಗೂ ಹಿರಿಯ ಮಹಿಳಾ ಸಾಧಕರ ಮಧ್ಯೆ ಹಾಗೂ ಇತರ ಮಹಿಳೆಯರ ಮತ್ತು ಪುರುಷರ ಮಧ್ಯೆ ಮಹಿಳೆ ಮತ್ತು ಕುಟುಂಬ ನಿರ್ವಹಣೆ ಬಗ್ಗೆ ದೀರ್ಘ ಚರ್ಚೆ ನಡೆಯಿತು. ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶ್ರೀ ರಾಘವೇಂದ್ರ, ಪ್ರಾಚಾರ್ಯರು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಎಲ್ಲಾ ಸಂಘಟನೆಗಳಿಗೂ ಮತ್ತು ಎಲ್ಲಾ ಮಹಿಳೆಯರಿಗೂ ಸಹ ಆಯೋಜಕರಿಗೂ ಧನ್ಯವಾದಗಳು ತಿಳಸಿದರು. ಅನಿತಾ 6ನೇ ಸೆಮ್ ಸಿಪಿಯಿಂದ ನಿರೂಪಣೆ, ರುಚಿತಾ 6ನೇ ಸೆಮ್ ಸಿಎಸ್ ಅವರಿಂದ ಪ್ರಾರ್ಥನಾ ಗೀತೆ, ಭಾಗ್ಯಶ್ರೀ 2ನೇ ಸೆಮ್ ಸಿಎಸ್ ಅವರಿಂದ ಸ್ವಾಗತ, ಸಂಸ್ಥೆಯ ಕುಲಸಚಿವರು ಶ್ರೀ ಶಿವಶರಣಪ್ಪ ಗೌರ್, ಪುರುಷ ಮತ್ತು ಮಹಿಳಾ ಸಿಬ್ಬಂದಿಯವರು, ಅನೇಕ ವಿದ್ಯಾರ್ಥಿನಿಯರು ಹಾಜರಿದ್ದರು.