ಸರ್ಕಾರಿ ಮಹಿಳಾ ಕಾಲೇಜು: ಗ್ರೋ ವಿತ್ ಗೂಗಲ್ ಕಾರ್ಯಕ್ರಮ

ರಾಯಚೂರು, ಜ.೧೨- ಗ್ರೋ ವಿತ್ ಗೂಗಲ್ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಇತನಾಸ್ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿತ್ತು.
ನಗರದ ಮಹಿಳಾ ಸರ್ಕಾರಿ ಪ್ರಥಮ ಕಾಲೇಜು, ಪ್ಲೇಸ್ಮೆಂಟ್ ಸೆಲ್, ಐ ಕ್ಯೂ ಎಸಿ ವಿಭಾಗಗಳು ಮತ್ತು ಇತನಾಸ್ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಗ್ರೂ ವಿತ್ ಗೂಗಲ್ ಡೇಟಾ ಅನಾಲಿಸಸ್ ಎಂಬ ವಿಷಯದ ಮೇಲೆ ಈ ಒಂದು ಪರೀಕ್ಷೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಈ ಒಂದು ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ಕುಮಾರ್ ಚಾಲನೆ ನೀಡಿ, ವಿದ್ಯಾರ್ಥಿಗಳು ಈ ಒಂದು ಪರೀಕ್ಷೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಪ್ಲೇಸ್ಮೆಂಟ್ ಸೆಲ್ ಅಧಿಕಾರಿ ರಂಗನಾಥ್ ಬಿಲ್ಲಾರ್. ಐ ಕ್ಯೂ ಎಸಿ ವಿಭಾಗ ಸಂಯೋಜನಾಧಿಕಾರಿಗಳಾದ ಡಾ.ಜ್ಯೋತಿ ಸಿ ಕೆ., ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಮತ್ತು
ಯು.ಎನ್.ಡಿ.ಪಿ ಅಧಿಕಾರಿ ಶಶಿಕಾಂತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.