ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪೆನ್ನು, ಪ್ಯಾಡ್ ವಿತರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.09: ಇಲ್ಲಿನ ಪೂರ್ವ ಮತ್ತು ಪಶ್ಚಿಮ ಶಿಕ್ಷಣ ವಲಯದ 70  ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು. ಈ ಬಾರಿಯ 2024 ನೇ ಸಾಲಿನ ವಾರ್ಷಿಕ ಪರೀಕ್ಷೆ ಬರೆಯಲು ಪೆನ್ನು, ಪ್ಯಾಡಿನ ಬಗ್ಗೆ ಚಿಂತಿಸಬೇಕಾಗಿಲ್ಲವಂತೆ.
ಕಾರಣ ಉದ್ಯಮಿ ಜೋಳದರಾಶಿಯ ಬಿ.ತಿಮ್ಮಪ್ಪ ಮತ್ತವರ ಕುಟುಂಬವು. ದಿ.ಜೋಳದರಾಶಿ ಬಿ.ಎರಿಸ್ವಾಮಿ ಅವರ ಸ್ಮರಣೆ ಹಾಗೂ ಜೋಳದರಾಶಿ ಬಳಿಯ
ತಮ್ಮದೇ ಮಾಲೀಕತ್ವದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್‌ ನ  ಮೂರನೇ ವಾರ್ಷಿಕೋತ್ಸವ ಅಂಗವಾಗಿ ತಮ್ಮ ದುಡಿಮೆಯ ಒಂದಿಷ್ಟು ಆದಾಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಪಯೋಗಿಸುವ  ನಿಟ್ಟಿನಲ್ಲಿ 6732 ವಿದ್ಯಾರ್ಥಿಗಳಿಗೆ ಎರೆಡು ಪೆನ್ನು, ಪ್ಯಾಡ್ ಕೊಡಲು ನಿರ್ಧರಿಸಿದೆಂದು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ತಿಳಿಸಿದರು.
ನಾನು ಬಡತನದಿಂದ ಬಂದವ, ನನಗೂ ಪರೀಕ್ಷೆ   ಬರೆಯುವ ವೇಳೆ ಪ್ಯಾಡ್ ಹಾಗೂ ಪೆನ್‌ಗಳ ಸಮಸ್ಯೆಯಿತ್ತು. ಆದಾಗ್ಯೂ ಬಡತನದಲ್ಲಿಯೇ ಓದಿ ಇಂದು ಉದ್ಯಮಿಯಾಗಿ ಬೆಳೆಯಲು ಆಸ್ಪದವಾಗಿದೆ. ನನ್ನಂತೆಯೇ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂಬುದಾಗಿದೆ.
ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ನೆರವು ನೀಡಲು ಸಹ ನಮ್ಮ ಕುಟುಂಬ ಸಿದ್ಧವಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಕಡಿಮೆ ಅಲ್ಲ; ಅವರಲ್ಲೂ, ಅಪಾರ ಜ್ಞಾನ ಹಾಗೂ ಸಾಧನೆಯ ಮಾಡುವ ಶಕ್ತಿಯೂ ಇದೆ. ಅವರಿಗೆ ಸೂಕ್ತ ಸ್ಪಂದನೆ ಹಾಗೂ ಸಹಕಾರ ನೀಡಬೇಕಷ್ಟೇ. ಸರ್ಕಾರಿ ಶಾಲೆಯಲ್ಲಿ ಓದಿದ ಅದೆಷ್ಟೋ ಜನರು ದೊಡ್ಡ ಹುದ್ದೆಗಳಲ್ಲಿದ್ದು. ಉದ್ಯಮಿಗಳಾಗಿಯೂ ಹೆಸರು ಮಾಡಿದ್ದಾರೆ. ಹೀಗಾಗಿ “ಶಿಕ್ಷಣಕ್ಕೆ ಒಂದಷ್ಟು ನೆರವು” ಘೋಷಣೆಯಡಿ ಈ ವರ್ಷ  ಈ ಕಾರ್ಯ ಮಾಡುತ್ತಿದೆಂದರು. ಮುಂಬರುವ ವರ್ಷ ದೇವರು ಮತ್ತಷ್ಟು ಶಕ್ತಿ ನೀಡಲಿ. ಮತ್ತಷ್ಟು ಹೆಚ್ಚಿನ ಮಕ್ಕಳಿಗೆ ನೀಡುವ ಪ್ರಯತ್ನ ನನ್ನದು ಎಂದರು.
ಸುದ್ದಿಗೋಷ್ಟಿ ಯಲ್ಲಿ ಬಿ.ಎರ್ರಿಸ್ವಾಮಿ, ಬಿ.ಚಂದ್ರಶೇಖರ್, ಶೇಕ್ಷಾವಲಿ, ಸುಧಾಕರ್ ಮೊದಲಾದವರು ಇದ್ದರು.