ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥರಾದ ಜೆ.ಎಲ್ ಈರಣ್ಣ ನವರಿಗೆ

ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿ ತನ್ನ 38ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ ಚಂದ್ರಕಾಂತ ಎಂ ಯಾತನೂರು, ಪ್ರೊ ಸಿ ಸೋಮಶೇಖರ್, ಇನ್ನೋರ್ವ ಕುಲಸಚಿವರಾದ ಪ್ರೊ ಸಂಜೀವ್ ಕುಮಾರ ರವರು ಜೆ ಎಲ್ ಈರಣ್ಣ ನವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದರು. ಇವರು ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಮತ್ತು ಸಂಶೋಧನಾ ವಿಭಾಗದಲ್ಲಿ ಡಾ .ಲಕ್ಷ್ಮಣ್ ಕವಳೆ ರವರ ಮಾರ್ಗದರ್ಶನದಲ್ಲಿ ” Problems and Challenges of Pourakarmikas: In Urban areas of Hyderabad Karnataka ” ಎನ್ನುವ ವಿಷಯದಲ್ಲಿ ಮಹಾಪ್ರಬಂಧವನ್ನು2019 ರಲ್ಲಿಯೇ ಮಂಡಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಘಟಿಕೋತ್ಸವ ಕಾರ್ಯಕ್ರಮವು ಮುಂದೂಡಲ್ಪಟ್ಟಿತ್ತು , ಅದು ದಿನಾಂಕ :20/11/2020 ರಂದು ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.