
ಔರಾದ :ಆ.15: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲ ಸೂರ್ಯಕಾಂತ ಚಿದ್ರೆ ಅವರು ಧ್ವಜಾರೋಹಣ ನೆರವೇರಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಸಂಜೀವಕುಮಾರ ತಾಂದಳೆಯವರು ಮಾತನಾಡಿ ಸ್ವತಂತ್ರ ನಮಗೆ ಸುಮ್ಮನೆ ಸಿಗಲಿಲ್ಲ ಅನೇಕ ತ್ಯಾಗ, ಬಲಿದಾನದ ಪ್ರತೀಕವಾಗಿ ನಾವು ಸ್ವತಂತ್ರ ಪಡೆದಿದ್ದೇವೆ, ವಿವಿಧ ಜಾತಿ, ಮತ, ಪಂಥಗಳ ಸಮಾಗಮ ನಮ್ಮ ದೇಶ, ಪ್ರಾಚೀನ ಕಾಲದಿಂದಲು ಸಂಪತ್ತ ಭರಿತ ದೇಶ ನಮ್ಮದು, ಅನೇಕರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ಸಂಪತ್ತು ಲೂಟಿ ಮಾಡಿದ್ದಾರೆ, ಆದರು ನಮ್ಮ ಭಾರತ ತನ್ನ ಗತವೈಭವ ಹೊಂದಿದೆ. ದೇಶ ನಮಗೆ ಏನನ್ನು ನೀಡಿದೆ ಎಂದು ಯೋಚಿಸದೇ ನಾನು ಭಾರತಕ್ಕೆ ಏನು ನೀಡಿದ್ದೇನೆ ಎಂದು ತಿಳಿಯಬೇಕು. ಪ್ರತಿಯೊಬ್ಬರು ಭಾರತದ ನಿಜ ಇತಿಹಾಸ ತಿಳಿದು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ವೇದ ಪ್ರಕಾಶ ಆರ್ಯ ಅವರು ಮಾತನಾಡಿ ನಮ್ಮ ಭಾರತ ಇಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ನನ್ನ ಭಾರತ ಇಂದು ಮುಂದೆ ಇದೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ನಾವು ಸ್ವತಂತ್ರ ಪಡೆಯುವ ಅವಶ್ಯಕತೆ ಇದೆ, ನಮ್ಮ ದೇಶದ ಸ್ವತಂತ್ರ ಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯೋಧರನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಸೂರ್ಯಕಾಂತ ಚಿದ್ರೆ, ಅಶೋಕ ಕೋರೆ, ಸಚ್ಚಿದಾನಂದ ರುಮ್ಮಾ, ಸಂಜೀವಕುಮಾರ ತಾಂದಳೆ, ಡಾ.ಜಯಶೀಲಾ, ಸಪನಾ ಮಾನಕರೆ, ಊರ್ವಶಿ ಕೊಡ್ಲಿ , ದಯಾನಂದ ಬಾವಗೆ, ವಿಠ್ಠಲ ಕಾಂಬಳೆ, ಚಂದ್ರಕಾಂತ ನಾರಾಯಣಪುರೆ, ಪತ್ರಕರ್ತ ಸಂತೋಷ ಚ್ಯಾಂಡೆಸುರೆ, ವಿದ್ಯಾರ್ಥಿ ಮುಖಂಡ ರತ್ನದೀಪ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.