ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಮೃತ ಮಹೋತ್ಸವದ ಉದ್ಘಾಟನೆ


ದಾವಣಗೆರೆ ಜು.19; ಮತ್ತೊಬ್ಬರಿಗೆ ಗುಲಾಮರಾಗದೆ ಆ ಗುಲಾಮಗಿರಿಯಿಂದ ಮುಕ್ತಿ ಪಡೆದಿರುವಂತಹ ಸ್ವಾತಂತ್ರ‍್ಯವಾದ ದೇಶ ನಮ್ಮ ಭಾರತ ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೭೫ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತನ್ನದೇ ಆದ ಸಾರ್ವಭೌಮತ್ವ, ತನ್ನದೇ ಆದ ಆಡಳಿತ ಈ ಎಲ್ಲಾ ಅಂಶಗಳನ್ನು ಯಾವ ದೇಶ ಒಳಗೊಂಡಿರುತ್ತದೆಯೋ ಆ ರಾಷ್ಟç ಸ್ವಾತಂತ್ರ‍್ಯ ರಾಷ್ಟç ಎನಿಸಿಕೊಳ್ಳುತ್ತದೆ. ನಮ್ಮ ನೇತಾರರು ನಮಗೆ ಗಳಿಸಿಕೊಟ್ಟ ಸ್ವಾತಂತ್ರ‍್ಯವನ್ನು ನಾವು -ನೀವೆಲ್ಲಾ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಇತಿಹಾಸವನ್ನು ತಿಳಿದವನು ಇತಿಹಾಸವನ್ನು ರಚಿಸುತ್ತಾನೆ, ಭಾರತದ ಇತಿಹಾಸವನ್ನು ಎಲ್ಲರೂ ತಿಳಿದುಕೊಂಡಿರಬೇಕು. ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎಂಬತೆ ಬದುಕಬೇಕು ಎಂದರು.ಕಾರ್ಯಕ್ರಮದಲ್ಲಿ  ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಗಿರೀಸ್ವಾಮಿ,  ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರೇಖಾ, ಎನ್‌ಸಿಸಿ ಅಧಿಕಾರಿ ಡಾ.ಸದಾಶಿವ,  ಪ್ರೊ. ನರೇಶ್, ಪ್ರೊ. ಲಕ್ಷ್ಮಿ, ಡಾ.ರಿಹಾನಾಬಾನು, ಡಾ. ವಿಶಾಲಾಕ್ಷಿ, ಪತ್ರಾಂಕಿತ ವ್ಯವಸ್ಥಾಪಕಿ ಗೀತಾದೇವಿ ಮತ್ತು ಬೋದಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿನಿ ಕು.ಹಸೀನಾ ಪ್ರಾರ್ಥನೆ ಹಾಡಿದರು, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ.ಲತಾ, ಸ್ವಾಗತಿಸಿದರು, ಪ್ರೊ. ಭೀಮಣ್ಣ ಸುಣಗಾರ ವಂದಿಸಿದರು. ಬಸವರಾಜ್ ನಿರೂಪಣೆ ನಡೆಸಿಕೊಟ್ಟರು.