
ಸಂಜೆವಾಣಿ ವಾರ್ತೆ
ಸಂಡೂರು: ಮೇ: 3: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10253 ಸಿಬ್ಬಂದಿಗಳಿಗೆ ಏಕ ಕಾಲದಲ್ಲಿ ತರಬೇತಿಯನ್ನು ನಿಡುವ ಮೂಲಕ ಚುನಾವಣೆಯ ಪೂರ್ಣ ತಯಾರಿಯನ್ನು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಿದರು.
ಮುಖ್ಯವಾಗಿ ತರಬೇತಿಯಲ್ಲಿ ಪಿ.ಅರ್.ಓ., ಎ.ಪಿ.ಅರ್.ಓ, ಪ್ರಥಮ ಪೋಲಿಂಗ್ ಅಧಿಕಾರಿ, ದ್ವಿತೀಯ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು, ಈ ಸಂದರ್ಭದಲ್ಲಿ ಮುಖ್ಯ ತರಬೇತು ದಾರರಾಗಿ 18 ಕೊಠಡಿಗಳಲ್ಲಿ 30 ತರಬೇತಿ ದಾರರು ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಶರಣಬಸಪ್ಪ ಅವರು ಮಾತನಾಡಿ ಮುಖ್ಯವಾಗಿ ಮತಯಂತ್ರದ ಮಾಹಿತಿ, ಮಾದರಿ ಮತದಾನ, ಮತಯಂತ್ರ ಹಾಗೂ ವಿವಿ ಪ್ಯಾಡ್ ಜೋಡಣೆ, ಮತ ಹಾಕಿದವರು ಹಾಕಿದ ಬಗ್ಗೆ ಕೇಳಿದರೆ ಅವರಿಗೆ ಕನ್ಪರಮೇಷನ್ ಪತ್ರ ನೀಡುವುದು, ಮತಯಂತ್ರಕೆಕ ಬ್ಯಾಟರಿ ಜೋಡಣೆ, ಏಜೆಂಟರ ಸಮ್ಮುಖದಲ್ಲಿ ಮತ ಯಂತ್ರದ ಪರಿಶೀಲನೆ ಮಾಡುವುದು ಹೀಗೆ ಮತದಾನಕ್ಕೆ ಪೂರ್ವದಲ್ಲಿ ಕೈಗೊಳ್ಳಬೇಕಾದ ಎಲ್ಲಾ ದಾಖಲಾತಿಗಳ ಬಗ್ಗೆ, ಹಾಗೂ ಮತ ಯಂತ್ರಗಳ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ, ಅಲ್ಲದೆ ಕಂಪ್ಯೂಟರ್ ಮೂಲಕ ಸ್ಲೈಡ್‍ಗಳನ್ನು ಸಹ ಪ್ರದರ್ಶನ ಮಾಡಿ ಯಾವುದೇ ರೀತಿಯಲ್ಲಿ ಅನುಮಾನಗಳಿಲ್ಲದ ರೀತಿಯಲ್ಲಿ ಚುನಾವಣಾ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿದೆ, ಈ ತರಬೇತಿಗೆ ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಸಿರಗುಪ್ಪ, ಕಂಪ್ಲಿಯಿಂದ ಸಿಬ್ಬಂದಿಗಳು ಅಗಮಿಸಿ ಉತ್ತಮ ರೀತಿಯ ತರಬೇತಿಯನ್ನು ಪಡೆದುಕೊಂಡರು ಎಂದು ತಿಳಿಸಿದರು.