ಸರ್ಕಾರಿ ಪಿಯು ಕಾಲೇಜಿಗೆ 9 ಡಿಸ್ಟಿಂಕ್ಷನ್ ತಂದುಕೊಟ್ಟ ಹಳ್ಳಿ ವಿದ್ಯಾರ್ಥಿಗಳು

ಸೇಡಂ,ಎ,12: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಉತ್ತಮ ಫಲಿತಾಂಶ ತರುವ ಮೂಲಕ ಜಿಲ್ಲಾ ಮಟ್ಟದಲ್ಲಿಯೇ ಅತಿ ಹೆಚ್ಚು ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಪ್ರಾಚಾರ್ಯರಾದ ಪಂಡಿತರಾವ್ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಂದು 2024 ರ ದ್ವೀತಿಯ ಪಿಯು ಪರೀಕ್ಷೆ 1 ರಲ್ಲಿ ಅತಿ ಹೆಚ್ಚು ಅಂಕ ಪಡೆದು ಡಿಸ್ಟ್ರಿಕ್ಷನ್ ತಂದು ಕೊಟ್ಟಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಕಾಲೇಜಿನ 9 ಕಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ, ಅದರಂತೆ ಪ್ರಥಮ 87, ದ್ವೀತಿಯ ದರ್ಜೆ 54, ತೃತೀಯ ದರ್ಜೆ 51 ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಕಲಾ ವಿಭಾಗದಲ್ಲಿ ಡಿಸ್ಟ್ರಿಕ್ಷನ್ ಪಡೆದ ವಿದ್ಯಾರ್ಥಿಗಳಾದ
ಸುಹಾನ ಬೇಗಂ 578,ಉಜ್ಮಾ 564,ಬಸ್ಸಮ್ಮ 530, ಮದಿಯಾ ಫಾತಿಮಾ 526, ಅಲ್ಲಿನಾ 523
ಭರತಮ್ಮ 522 , ಪವಿತ್ರಾ 514 ಹಾಗೂ ಪಿಯು ವಿಜ್ಞಾನ ವಿಷಯದಲ್ಲಿ ಡಿಸ್ಟ್ರಿಕ್ಷನ್ ಪಡೆದಂತಹ ವಿದ್ಯಾರ್ಥಿಗಳಾದ ಅಬ್ತಾಬ್ ಹುಸೇನ್ 526, ಸಾಬಣ್ಣ ತಿಪ್ಪಣ್ಣ 519 ಅಂಕಗಳಿಸುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಂಶುಪಾಲರು ಹರ್ಷ ವ್ಯಕ್ತಿಪಡಿಸಿದರು.

ಈ ವೇಳೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪಂಡಿತರಾವ್ ಪಾಟೀಲ್, ಹಿರಿಯ ಉಪನ್ಯಾಸಕರಾದ ಬಾಬು ಸೈಯದ್ ಸಾಹೇಬ್ ಅಮೃತ್. ಬಿ ಯಡಹಳ್ಳಿಕರ್, ನಾಗರಾಜ್ ಓಂಕಾರ್, ಜಯಂತ್ ದೇಸಾಯಿ, ಪ್ರೌಢಶಾಲೆಯ ಮುಖ್ಯ ಗುರುಗಳಾದ ನರಸಪ್ಪ, ಗೋಪಾಲ್ ಕೃಷ್ಣ, ಗೀತಾ ಮೇಡಂ, ಹಾಗೂ ವಿದ್ಯಾರ್ಥಿಗಳು ಇದ್ದರು.

ಸೇಡಂ ಪದವಿಪೂರ್ವ ಕಾಲೇಜಿನ ಇತಿಹಾಸದಲ್ಲಿಯೇ ಈ ಬಾರಿ ಅತಿ ಹೆಚ್ಚು ಡಿಸ್ಟ್ರಿಕ್ಟ್ ಪ್ರಥಮ ದರ್ಜೆ ದ್ವಿತೀಯ ದರ್ಜೆ ಪಡೆಯುವ ಮೂಲಕ ಕಾಲೇಜಿಗೆ ಹಳ್ಳಿ ವಿದ್ಯಾರ್ಥಿಗಳೇ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ.
ಪಂಡಿತ್ ರಾವ್ ಪಾಟೀಲ್

ಪ್ರಾಚಾರ್ಯರು ಪದವಿಪೂರ್ವ ಕಾಲೇಜು ಸೇಡಂ

ಖಾಸಗಿ ಶಿಕ್ಷಣ ಸಂಸ್ಥೆಗಳಿಕ್ಕಿಂತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಓದಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತರುವಲ್ಲಿ ಹಿಂದೆ ಇಲ್ಲಾ.
ನರಸಪ್ಪ

ಪ್ರೌಢಶಾಲೆಯ ಮುಖ್ಯಗುರು

ಕಾಲೇಜಿನಲ್ಲಿ ಶಿಕ್ಷಕರು ತಮ್ಮ ಕುಟುಂಬದ ಮಕ್ಕಳಂತೆ ಓದುವುದಕ್ಕೆ ಸಹಾಯಕ ನೀಡಿ ಪ್ರಯುಕ್ತ ಅತಿ ಹೆಚ್ಚು ಅಂಕ ಪಡೆದಲು ಸಿದ್ಧವಾಗಿದೆ.
ಬಸಮ್ಮ ತಂ ಶಾಮರಾಯ್ ವಿದ್ಯಾರ್ಥಿ