
ಬೀದರ್:ಜ.18: ವರ್ಗಾವಣೆಗೊಂಡ ಔರಾದ್ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಭಾರ ಪ್ರಾಚಾರ್ಯ ಹಾಗೂ ಉಪನ್ಯಾಸಕರನ್ನು ಸತ್ಕರಿಸಿ, ಬೀಳ್ಕೊಡಲಾಯಿತು.
ಪ್ರಭಾರ ಪ್ರಾಚಾರ್ಯ ವಿಜಯಕುಮಾರ ಜೆ. ಜಾಧವ್, ಉಪನ್ಯಾಸಕರಾದ ಮಹೇಶ, ಉಮೇಶ, ವಿಜಯಕುಮಾರ ವಲ್ಲೂರೆ, ಅರುಣ ಮುಕಾಶಿ ಹಾಗೂ ವಿನಾಯಕ ಅವರನ್ನು ಯುವ ಮುಖಂಡ ರಾಜಕುಮಾರ ಕಂದಗೂಳೆ ಕರಂಜಿ (ಬಿ) ಹಾಗೂ ಭೀಮಣ್ಣ ರಕ್ಷಾಳ ಕಾಲೇಜಿನಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಭಾರ ಪ್ರಾಚಾರ್ಯೆ ಶೈಲಜಾ ಶಾಮರಾವ್, ಜಿರೋಬೆ ಸಚಿನ್, ಉತ್ತಮಕುಮಾರ, ಹಣಮಂತ ಕಾಳೆ ಹಾಗೂ ಡಾ. ಸಂಜೀವಕುಮಾರ ಡಿ. ಇದ್ದರು.