ಸರ್ಕಾರಿ ಪದವಿ ಪೂರ್ವ ಕಾಲೇಜು ಮೇಹಕರ್ ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ:ಪ್ರಾಂಶುಪಾಲ ಪಿರಾಜಿ ಸಿದ್ರಾಮ

ಭಾಲ್ಕಿ:ನ.20: ತಾಲೂಕಿನ ಮೇಹಕರ್ ಗ್ರಾಮದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ , ಮೂಲ ಸೌಕರ್ಯಗಳು ಇಲ್ಲದೇ ಹಲವಾರು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಬೇಕೆಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಿಳಿಸಿದರು.
” ನಾನು ಕಳೆದ ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಯಾರೊಬ್ಬರೂ ಅಧಿಕಾರಿಯೂ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಪ್ರಾಂಶುಪಾಲರಾದ ಪೀರಾಜಿ ಸಿದ್ರಾಮ ಹೇಳಿದರು.
” ಕಾಲೇಜಿನಲ್ಲಿ ಕೇವಲ ನೀರಿನ ಸಮಸ್ಯೆ ಅಲ್ಲವೇ ದನಕರುಗಳು ಕಾಲೇಜಿನ ಆವರಣದಲ್ಲಿ ಮೇಯಲು ಬಿಡುತ್ತಿದ್ದು, ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಬಸ್ಸಿನ ಸಮಸ್ಯೆ, ಹಾಗೂ ಇಲ್ಲಿ ಸಮಸ್ಯೆಗಳ ಸುರಿಮಳೆ ಇದೆ ಎಂದು ಉಪನ್ಯಾಸಕರಾದ ನರಸಿಂಗರಾವ್ ರಾಮಚಂದ್ರ ಸಮಸ್ಯೆಗಳು ತೋಡಿಕೊಂಡರು.
” ತಕ್ಷಣ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ತಹಸಿಲ್ದಾರರು, ಜಿಲ್ಲಾಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಸ್ಥಳೀಯ ಶಾಸಕರು, ತಕ್ಷಣ ಭೇಟಿಕೊಟ್ಟು ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ವಿದ್ಯಾರ್ಥಿನಿ ಭಾಗ್ಯಶ್ರೀ ಹೇಳಿದಳು .
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪಿರಾಜಿ ಸಿದ್ರಾಮ , ನಸಿರ್ಂಗ್ ರಾಮಚಂದ್ರ , ಡಾ. ಶ್ರೀನಾಥ್, ಡಾ.ಪಪ್ಪು ಮೇತ್ರೆ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.