ಸರ್ಕಾರಿ ನೌಕರರ ಸಂಘವತಿಯಿಂದ ಕೊರಾನಾ ವಾರಿಯರ್ಸ ಗಳಿಗೆ ಸನ್ಮಾನ

ಶಹಾಪುರ:ನ.8:ಇತ್ತಿಚೆಗೆ ಕೊರಾನ್ ವೈರಸ್ ಹಿನ್ನಲೆಯಲ್ಲಿ ಲಾಕ ಡೌನ್ ನೀತಿಯ ಸಂದಿಗ್ತೆಯಲ್ಲಿ ವiಹಾರಾಷ್ಟ್ರದಿಂದ ಬಂದ ಸಾವಿರಾರು ಕಾರ್ಮಿಕರಿಗೆ ಊಟ ವಸತಿಯ ಜೊತೆಗೆ ಅವರ ಆರೋಗ್ಯಕರವಾಗಿ ಹೆಚ್ಚು ಕಾಳಜಿ ವಹಿಸಿಕೊಂಡ ಕೊರಾನ್ ವಾರಿಯರ್ಸಗಳಾದ ಗ್ರಾಮ ಪಂಚಾಯತ ಹಾಲಗೇರಾ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ ಸಜ್ಜನ್ , ಆರೋಗ್ಯ ಇಲಾಖೆಯ ಶರಣು ಹೊಸಮನಿ, ಮೂರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಂಬುಲಿಂಗ ಪಾಟೀಲ್, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಸೂರಯ್ಯ ಬೇಗಂ, ಮಹಿಳಾ ಪೇದೆ ಶ್ರೀಮತಿ ದೇವಮ್ಮನವರಿಗೆ ಶಹಾಪುರ ಸರ್ಕಾರಿ ನೌಕರರ ಸಂಘದಿಂದ ಗೌರವ ಸನ್ಮಾನ ಮಾಡಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರಾದ ಮಹಿಪಾಲರಡ್ಡಿ ಪಾಟೀಲ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ಆರ್.ಎಮ್ ನಾಟೇಕಾರ, ಪ್ರೌಡ ಶಾಲೆ ಶಿಕ್ಷಕರ ಸಂಘದ ರಾಮಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಧ್ಯಕ್ಷರಾz,À ಬಸವರಾಜ ಯಾಳಗಿ ಆಗಮಿಸಿದ್ದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶಹಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪಕೀರಪ್ಪಗೌಡ ಗೊನಾಲ್ ಆಗಮಿಸಿದ್ದರು, ಭೀಮನಗೌಡ ಬಿರೆದಾರ ಸ್ವಾಗತಿಸಿದರು. ಜಯಪ್ರಕಾಶ ಕುಲಕರ್ಣಿ ಪ್ರಾರ್ಥಿಸಿದರು. ಕೊನೆಯಲ್ಲಿ ಮಲ್ಲೇಶಪ್ಪ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಕೊಶಾಧ್ಯಕ್ಷರಾದ ಬಸನಗೌಡ ಬೆಳ್ಳಿಕಟ್ಟಿ, ಭೀಮಣ್ಣ ಅಂಚೆಸೂಗೂರ, ಗುರು ಚೌಕಿಮಠ. ಅಮರೇಶ ನಾಯ್ಕಲ, ಶೀಲಾ ಗುಡಿ ನಿಂಗಣ್ಣ ಪುರ್ಲೆ ರಾಮಣಗೌಡ ಖಾನಾಪುರ, ಬಸವಲಿಂಗಪ್ಪ ಪರಿವಾಣ, ಭಾರತಿ ಹುಳಂಡಗೇರಿ, ಪ್ರಶಾಂತ ಗುಗ್ಗರಿ ವಸಂತ ಪವಾರ್, ಅಮರೇಶ ಕಾಶಿ ಶಿಕಾರಿ, ಗೊಪಾಲ ಬಿಜಾಸ್ಪೂರ. ಅಬ್ದುಲಬಾಷಾ ಮುಲ್ಲಾ ಅನೇಕ ಸರ್ಕಾರಿ ನೌಕರರು ಭಾಗವಹಿಸಿದ್ದರು.