
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.20: ನಗರದ ತಾಲೂಕು ಕ್ರೀಡಾಂಗಣ ದಿಂದ ಗಾಂಧಿ ವೃತ್ತದ ವರೆಗೆ ಮತದಾನ ಜಾಗೃತಿ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಿರುಗುಪ್ಪ ಹಾಗೂ ತಾಲುಕು ಸ್ವೀಪ್ ಸಮಿತಿ ಅಡಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಮೆರವಣಿಗೆ ಮಾಡುವುದರ ಮೂಲಕ ಜಾಗೃತಿ ಅಭಿಯಾನ ನಡೆಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗರೆಡ್ಡಿ, ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಮಡಗಿನ ಬಸಪ್ಪ, ತಾಲೂಕು ಆರೋಗ್ಯ ಅಧಿಕಾರಿ ಈರಣ್ಣ ಮತ್ತು ತಾಲೂಕಿನ ಎಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಇದ್ದರು.